ಬೈಂದೂರು: ಯುವಕರು ಕೇವಲ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಕಾಲಹರಣ ಮಡುವುದಕ್ಕಿಂತ ಸ್ವಂತ ಉದ್ಯಮದ ಮೂಲಕ ಸಾಧಕರಾಗಬಹುದು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ತಾಳ್ಮೆಯಿಂದ ಉದ್ಯಮ ಕ್ಷೇತ್ರದಲ್ಲಿ ದುಡಿದರೆ ಯಶಸ್ವೀ ಉದ್ಯಮಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದು ಯುವ ಉದ್ಯಮಿ ಉಪ್ಪುಂದ ಪಾಂಡುರಂಗ ಪಡಿಯಾರ್ ಹೇಳಿದರು ಅವರು ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಉಪ್ಪುಂದ ಜೇಸಿ ಸಪ್ತಾಹ ಸಮ್ಮಿಲನದಲ್ಲಿ ಜೆಸಿಐ ಕೊಡಮಾಡಿದ ಉದ್ಯಮರತ್ನ ಸಾಧನಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಮುಖ್ಯವಾಗಿ ಯುವಕರು ಕಾಲಹರಣ ಮಾಡುವುದಕ್ಕಿಂತ ಸಮಯದ ಮಹತ್ವ ಅರಿತು ವ್ಯಕ್ತಿ ಶಕ್ತಿಯಾಗಿ ಬದಲಾಗಬೇಕು. ಈಗಿನ ಕಾಲಮಾನಕ್ಕನುಗುಣವಾದ ಚಿಕ್ಕಪ್ರಮಾಣದಲ್ಲಿ ಉದ್ಯಮ ಆರಂಭಿಸಿ ಹಂತ ಹಂತವಾಗಿ ಅದನ್ನು ಬೆಳಸುವಲ್ಲಿ ಶ್ರಮಿಸಬೇಕು.ನಾವು ಉದ್ಯೋಗಿಗಳಾಗಿ ಬೇರೆ ಕಡೆಗಳಲ್ಲಿ ದುಡಿಯುವುಕ್ಕಿಂತ ನಮ್ಮದೇ ಸ್ವಂತ ಉದ್ಯಮದ ಮೂಲಕ ನಾಲ್ಕು ಜನರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತಿಸಬೇಕು.ಕಷ್ಟಪಟ್ಟರೆ ಫಲಪ್ರಾಪ್ತಿ ಎನ್ನುವ ಮಾತಿನಂತೆ ಹಣದ ವ್ಯಾಮೋಹಕ್ಕೆ ಒಳಗಾಗದೇ ಧನಾತ್ಕಕ ಚಿಂತನೆ ಹಾಗೂ ಆರೋಗ್ಯಕರ ಪೈಪೋಟಿ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಾಂದಿಯಾಗಬೇಕು ಎಂದರು.

ಉಪ್ಪುಂದ ಜೆಸಿಐ ಘಟಕದ ಅಧ್ಯಕ್ಷ ನಾಗರಾಜ್ ಪೂಜಾರಿ ಉಬ್ಜೇರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ, ಉದ್ಯಮಿ ನಿತಿನ್ ನಾರಾಯಣ, ಕರ್ನಾಟಕ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಯು. ಸುಭಾಷ್ ಪುರಾಣಿಕ, ರೋಟರಿ ಪೂರ್ವಾಧ್ಯಕ್ಷ ಐ. ನಾರಾಯಣ, ಕೆಆರ್‌ಎಸ್‌ಎಸ್ ಸಂಘದ ನಿವೃತ್ತ ಸಿಇಒ ಗಣಪಯ್ಯ ಗಾಣಿಗ, ಪೂರ್ವಾಧ್ಯಕ್ಷ ವೈ.ಮಂಗೇಶ್ ಶಾನುಭಾಗ್, ಉದ್ಯಮಿ ಪ್ರಸಾದ ಪ್ರಭು ಶಿರೂರು, ಉಪ್ಪುಂದ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಬಿ. ಎ. ಮಂಜು ದೇವಾಡಿಗ, ಉಪ್ಪುಂದ ರಾಣಿಬಲೆ ಮೀನುಗಾರ ಸಂಘದ ಅದ್ಯಕ್ಷ ವೆಂಕಟರಮಣ ಖಾರ್ವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಪ್ಪುಂದ ಬಸ್‌ನಿಲ್ದಾಣದ ಸಮಯ ಪಾಲಕ ಜಗ್ಗು ರವರನ್ನು ಸಮ್ಮಾನಿಸಲಾಯಿತು.ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.ನಿಕಟಪೂರ್ವಾಧ್ಯಕ್ಷ ಪುರುಷೋತ್ತಮದಾಸ್ ವಂದಿಸಿದರು.

 

 

 

Leave a Reply

Your email address will not be published.

five × one =