ಬೈಂದೂರು: ಬೈಂದೂರು ಉತ್ಸವ ಕ್ಷೇತ್ರದ ಅಭಿವೃದ್ದಿ ಅವಕಾಶಗಳ ಕಲ್ಪನೆಯಲ್ಲಿ ಕಂಡ ಕನಸು.ಒಂದೆ ಬಾರಿ ಎಲ್ಲವು ಸಾಕಾರಗೊಳಿಸುವ ತರಾತುರಿ ನಮ್ಮದಲ್ಲ ಬದಲಾಗಿ ಈ ವರ್ಷ ಆರಂಭವಾದರೆ ಹಂತ ಹಂತವಾಗಿ ಅವಕಾಶಗಳನ್ನು ಜೋಡಿಸುವ ಮೂಲಕ ನಿರಂತರ ಸಂಭ್ರಮವಿರಬೇಕೆನ್ನುವವುದೆ ಬೈಂದೂರು ಉತ್ಸವದ ಮೂಲ ಧ್ಯೇಯವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಬೈಂದೂರು ಸಾವಿರಾರು ಜನರು ಜಗತ್ತಿನಾದ್ಯಂತಯಿದ್ದಾರೆ.ಇಲ್ಲಿನ ಪ್ರಾಕೃತಿಕ ಸೌಂದರ್ಯ,ಧಾರ್ಮಿಕ ಹಿನ್ನೆಲೆ ಅತ್ಯಂತ ಶ್ರೇಷ್ಟತೆ ಮತ್ತು ಅವಕಾಶಗಳನ್ನು ತೆರೆದಿಡುತ್ತಿದೆ.ಇಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ಜೊತೆಗೆ ವಿಶ್ವಮಟ್ಟದ ಹೂಡಿಕೆದಾರರನ್ನು ಕರೆಯುವ ಕನಸು ನಮ್ಮದು.ವ್ಯವಸ್ಥೆ ಎಲ್ಲವು ಅಂದುಕೊಂಡಂತೆ ಪೂರಕವಲ್ಲದಿದ್ದರು ಕಲ್ಪನೆ ಸಾಕಾರಗೊಳಿಸುವ ಉತ್ಸುಕತೆ ಉತ್ತಮವಾಗಿ ವ್ಯಕ್ತವಾಗುತ್ತಿದೆ.ಎಲ್ಲರ ಸಹಕಾರದಲ್ಲಿ ಬೈಂದೂರು ಉತ್ಸವ ಅಭಿವ್ರದ್ದಿ ಕಲ್ಪನೆಯ ಕನಸಿನ ತೇರು ಎಳೆಯಬೇಕಿದೆ ಉತ್ಸವದ ಮೂಲಕ ಬೈಂದೂರು ಸಂಭ್ರಮಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ,ಉದ್ಯಮಿ ಜಿ.ಗೋಕುಲ ಶೆಟ್ಟಿ,ಜಯಾನಂದ ಹೋಬಳಿದಾರ್,ಗೌರಿ ದೇವಾಡಿಗ, ತಂಗಪ್ಪನ್,ಮಂಜುನಾಥ ಪೂಜಾರಿ ಸಸಿಹಿತ್ಲು, ಶ್ರೀ ಗಣೇಶ ಉಪ್ಪುಂದ, ಅನಿತಾ ಅರ್.ಕೆ,ಭಾಗೀರಥಿ ಸುರೇಶ್,ಸುರೇಂದ್ರ ಖಾರ್ವಿ ಉಪಸ್ಥಿತರಿದ್ದರು.
ಪುಷ್ಪರಾಜ್ ಶೆಟ್ಟಿ ಶಿರೂರು ಸ್ವಾಗತಿಸಿ ವಂದಿಸಿದರು.
ವರದಿ/ಗಿರಿ ಶಿರೂರು