ಬೈಂದೂರು: ಕಲೆ, ಸಾಹಿತ್ಯ,ಸಂಸ್ಕ್ರತಿ ಸೇರಿದಂತೆ ಬೈಂದೂರಿನ ಸಾಧನೆ ಜಗತ್ತಿನಾದ್ಯಂತ ಪಸರಿಸಿದೆ.ಊರಿನ ಸಾಧನೆ ಸಂಭ್ರಮವಾಗಬೇಕಾದರೆ ಸಂಘಟಿತ ಶ್ರಮ ಅಗತ.ಇಲ್ಲಿನ ಶಾಸಕ ಗುರುರಾಜ ಗಂಟಿಹೊಳೆಯವರು ಸರಕಾರದ ಪೂರಕ ಸ್ಪಂಧನೆ ದೊರೆಯದಿದ್ದರು ದಾನಿಗಳ ನೆರವಿನಿಂದ ಮಾದರಿಯ ಅಭಿವೃದ್ದಿ ಕಾರ್ಯ ನಡೆಸಿದ್ದಾರೆ.ಬೈಂದೂರು ಉತ್ಸವದ ಮೂಲಕ ಸಾಂಸ್ಕ್ರತಿಕ ಕಲ್ಪನೆಯಲ್ಲಿ ಕಂಡಿರುವ ಅಭಿವೃದ್ದಿ ಕನಸು ಸರ್ವರ ಸಹಕಾರದಲ್ಲಿ ಸಂಪನ್ನಗೊಳ್ಳಬೇಕಿದೆ ಎಂದು ಉದ್ಯಮಿ ರಾಮಕೃಷ್ಣ ಶೇರುಗಾರ್ ಹೇಳಿದರು ಅವರು ಗುರುವಾರ ಸಮೃದ್ದ ಜನಸೇವಾ ಟ್ರಸ್ಟ್ ಬೈಂದೂರು ಸಹಭಾಗಿತ್ವದಲ್ಲಿ ಬೈಂದೂರು ಉತ್ಸವ -2024 ಅಂಗವಾಗಿ ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ನಡೆದ ಕ್ರೀಡಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಮಾತುಗಳನ್ನಾಡಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಜಿ.ಗೋಕುಲ ಶೆಟ್ಟಿ,ಜಯಾನಂದ ಹೋಬಳಿದಾರ್,ಗೌರಿ ದೇವಾಡಿಗ, ತಂಗಪ್ಪನ್,ಮಂಜುನಾಥ ಪೂಜಾರಿ ಸಸಿಹಿತ್ಲು, ಶ್ರೀ ಗಣೇಶ ಉಪ್ಪುಂದ, ಅನಿತಾ ಅರ್.ಕೆ ಉಪಸ್ಥಿತರಿದ್ದರು.
ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಸಸಿಹಿತ್ಲು ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು