ಶಿರೂರು; ಯುವ ಸಮುದಾಯ ದೂರದೃಷ್ಟಿತ್ವದ ಚಿಂತನೆ ಮೈಗೂಡಿಸಿಕೊಂಡಾಗ ಸಾಂಘಿಕ ಸಾಮರ್ಥ್ಯ ಬಿಂಬಿತವಾಗುತ್ತದೆ.ಧಾರ್ಮಿಕ ಹಿನ್ನೆಲೆಯಲ್ಲಿ ಮುನ್ನೆಡೆದಾಗ ಶ್ರೇಯಸ್ಸು ತನ್ನಿಂತಾನೆ ಒಲಿಯುತ್ತದೆ. ಪ್ರತಿ ಊರಿನಲ್ಲೂ ದಾನಿಗಳಿದ್ದಾರೆ ಆದರೆ ಅವರ ಸಕರಾತ್ಮಕ ಸ್ಪಂಧನೆಗೆ ನಮ್ಮ ಕಾರ್ಯಯೋಜನೆ ಪೂರಕವಾಗಿರಬೇಕು ಎಂದು ವಿಶ್ರಾಂತ ಕನ್ನಡ ಉಪನ್ಯಾಸಕ ವಾಮನ್ ಇಡ್ಯಾ ಹೇಳಿದರು.ನಿವೃತ್ತ ಉಪನ್ಯಾಸಕ ವಾಮನ ಇಡ್ಯಾ ಸುರತ್ಕಲ್ ಹೇಳಿದರು ಅವರು ಮಾನಸ ಮಿತ್ರ ಮಂಡಳಿ ಆಲಂದೂರು ಇದರ 21 ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ನೂತನ ಸಭಾ ಭವನದ ಗೌರಿ ರಂಗ ಮಂಟಪ ಲೋಕಾರ್ಪಣೆಗೊಳಿಸಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಉದಯ ಮಾಕೋಡಿ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಆಹಾರ ನಿರೀಕ್ಷಣಾಧಿಕಾರಿ ದೇವಪ್ಪ ಮಾಕೋಡಿ,ಸ್ಥಳ ದಾನಿಗಳಾದ ಸುಬ್ಬ ಪೂಜಾರಿ ಕುಂಬ್ರಿಕೊಡ್ಲು,ಶಿರೂರು ಜೆಸಿಐ ಅಧ್ಯಕ್ಷ ಸತೀಶ ಕೊಠಾರಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಹೆಸ್ಕೆತ್ತೂರು ಫ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕ ವಾಮನ ಇಡ್ಯಾ ಸುರತ್ಕಲ್,ನಿವೃತ್ತ ಆಹಾರ ನಿರೀಕ್ಷಣಾಧಿಕಾರಿ ದೇವಪ್ಪ ಮಾಕೋಡಿ ಹಾಗೂ ಸ್ಥಳದಾನಿಗಳಾದ ಸುಬ್ಬ ಪೂಜಾರಿ ಕುಂಬ್ರಿಕೊಡ್ಲು ರವರನ್ನು ಸಮ್ಮಾನಿಸಲಾಯಿತು.
ಶಿಕ್ಷಕ ಪ್ರಕಾಶ ಮಾಕೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮೋಹನ ಕೊಠಾರಿ ಸ್ವಾಗತಿಸಿದರು.ಆಲಂದೂರು ಮಂಜುನಾಥ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.ಗೋಪಾಲ ಗಾಣಿಗ ವಂದಿಸಿದರು.ಶ್ರೀಕಾಂತ ಕಾಮತ್ ವಂದಿಸಿದರು.
ವರದಿ/ ಗಿರಿ ಶಿರೂರು
ಚಿತ್ರ: ಸುರೇಶ್ ಮಾಕೋಡಿ