ಬೈಂದೂರು: ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ರವರ ಶಿಫಾರಸ್ಸಿನ ಮೇರೆಗೆ ಬೈಂದೂರು ಬ್ಲಾಕ್ ಇದರ ಕಿಸಾನ್ ಘಟಕದ ನೂತನ ಅಧ್ಯಕ್ಷರಾಗಿ ಎಸ್.ವೀರಭದ್ರ ಗಾಣಿಗ ಹಾಲಂಬೇರು ಇವರನ್ನು ಆಯ್ಕೆ ಮಾಡಲಾಯಿತು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ,ಭರತ್ ದೇವಾಡಿಗ,ಉಮೇಶ ದೇವಾಡಿಗ,ಮಂಜುನಾಥ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.