ಬೈಂದೂರು,: ಸಂಸ್ಥೆಗಳನ್ನು ಕಟ್ಟುವುದು ಸುಲಭ ಆದರೆ ಪೋಷಿಸಿ ಬೆಳೆಸುವುದು ಕಷ್ಟಕರವಾಗಿದೆ.ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸಿದ ಹೆಮ್ಮೆಯಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಿಂತನೆ ಮೂಲಕ ಅಭಿವೃದ್ದಿ ಸಾಧ್ಯ ಎಂದು  ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನುಡಿದರು ಅವರು ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಪ್ರದಾನ ಕಛೇರಿಯಲ್ಲಿ ನಡೆದ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರಿಗೆ ಶೇ.13% ಡಿವಿಡೆಂಡ್ ಘೋಷಣೆ ಮಾಡಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಕೆ.ಶಂಕರ ಪೂಜಾರಿ,ಚಿಕ್ಕು ಪೂಜಾರಿ, ಕಲ್ಪನಾ ಭಾಸ್ಕರ್,ಯು.ಕೇಶವ ಪೂಜಾರಿ,ಕೆ.ಶ್ರೀನಿವಾಸ ಪೂಜಾರಿ,ಜಯಸೂರ್ಯ ಪೂಜಾರಿ,ಶೇಖರ ಪೂಜಾರಿ ನಾಗೂರು,ಉದಯ ಜಿ.ಪೂಜಾರಿ,ವೆಂಕಟೇಶ ಮಾಚ ಪೂಜಾರಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ನಿರ್ದೇಶಕರಾದ ಎಸ್.ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಗಣೇಶ ಬಿ.ಪೂಜಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.ಹಾಲಾಡಿ ಶಾಖಾ ವ್ಯವಸ್ಥಾಪಕ ಗೋಪಾಲ ಪೂಜಾರಿ ವಂದಿಸಿದರು.

 

 

Leave a Reply

Your email address will not be published.

five × 3 =