ಬೈಂದೂರು: ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಎಫ್.ಎಸ್.ಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ  ಬೈಂದೂರು ಸೋಮೇಶ್ವರ ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪೌರ ಕಾರ್ಮಿಕರನ್ನು ಸಮ್ಮಾನಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗಿನಿಂದಲೂ ಎಲ್ಲೆಡೆಯೂ ಸ್ವಚ್ಛತೆಯ ಅರಿವು ಮೂಡಿದೆ.ಮೋದಿಯವರ 72ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಆದರ್ಶಗಳನ್ನು ನಾವು ಪಾಲಿಸಬೇಕಿದೆ.ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಧಾನಿಯವರ ದಿಟ್ಟ ಹೆಜ್ಜೆ ಮೆಚ್ಚುವಂತದ್ದು. ಆರೋಗ್ಯ ಹಾಗೂ ಸ್ವಚ್ಚತೆ ವಿಚಾರದಲ್ಲಿ ಪ್ರಧಾನಿಯವರು ಹಾಕಿಕೊಟ್ಟ ಮಾರ್ಗದಂತೆ ಈ ಮಹತ್ವದ ಕಾರ್ಯಕ್ರಮ ರೂಪಿಸಿದ್ದು ಮುಂದಿನ ದಿನಗಳಲ್ಲೂ ಕೂಡ ಬಡವರು ಹಾಗೂ ಮದ್ಯಮ ವರ್ಗದವರ ಪಾಲಿಗೆ ಈ ಕಾರ್ಯಕ್ರಮ ತಲುಪಬೇಕಿದೆ. ಅವರ ಜನ್ಮದಿನದ ದಿನವೇ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿರುವುದು ಸಂತಸ ತಂದಿದೆ. ಅಭಿಯಾನ ನಿರಂತವಾಗಿ ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಕೇದಾರನಾಥ, ಗಂಗೊಳ್ಳಿ ಕರಾವಳಿ  ಕಾವಲು ಪಡೆಯ ಯುವರಾಜ್ ಕೆ.ಪಿ., ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಕುಮಾರ್, ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಹೆಚ್. ಉದಯ ಆಚಾರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ ಬಿ.ಕೆ., ಬೈಂದೂರು, ರೆಡ್ ಕ್ರಾಸ್ ಬೈಂದೂರು ಘಟಕದ ಸಭಾಪತಿ ನಿತೀಶ್ ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ರಘು ನಾಯ್ಕ್, ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಂಜುನಾಥ್ ನಾಯ್ಕ್, ಉಪಪ್ರಾಂಶುಪಾಲ ಪದ್ಮನಾಭ, ರೋಟರಿ ಲಿಟರಸಿ ಪ್ರೆಸಿಡೆಂಟ್ ಐ. ನಾರಾಯಣ, ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ ರಾಜು ಎಸ್., ಬೈಂದೂರು ಶಿಶುಮಂದಿರದ ಮಂಜುನಾಥ ಶೆಟ್ಟಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ್ ಬಂಗೇರ, ಎಸ್.ಎಫ್.ಎಲ್ ಇಂಡಿಯಾದ ದಿನೇಶ್ ಸಾರಂಗ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಾದ ಕಮಲ, ಸುವರ್ಣ, ಉಮೇಶ್, ಹರೀಶ್ ಹಾಗೂ ಗಿರೀಶ್ ಅವರನ್ನು ಸನ್ಮಾನಿಸಲಾಯಿತು.ಅನುದೀಪ್ ಹೆಗ್ಡೆ ಸ್ವಾಗತಿಸಿದರು.ಪತ್ರಕರ್ತರಾದ ಸುನಿಲ್ ಹೆಚ್. ಜಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಮಿನುಷಾ ಕಾಂಚನ್ ವಂದಿಸಿದರು.

 

Leave a Reply

Your email address will not be published.

thirteen − 8 =