ಬೈಂದೂರು: ಬೈಂದೂರು ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭ .ಅ 09 ರಿಂದ 11 ರ ವರೆಗೆ ನಡೆಯಲಿದೆ.
ಅ.09 ರಂದು ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ದುರ್ಗಾಹೋಮ,ಅಕ್ಷರ ಅಭ್ಯಾಸ ಸರ್ವ ಸೇವಾ ಪೂಜೆ,ಮಹಾಪೂಜೆ,ಮದ್ಯಾಹ್ನ ಪೂಜೆ,ರಾತ್ರಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ.ಸಂಜೆ ಭಜನಾ ಕಾರ್ಯಕ್ರಮ.ಸಭಾ ಕಾರ್ಯಕ್ರಮ,ಗಣ್ಯರಿಗೆ ಸಮ್ಮಾನ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ,ಡಾನ್ಸ್ ಧಮಕಾ.ರಾತ್ರಿ 10 ಗಂಟೆಗೆ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಇವರಿಂದ ಶನೇಶ್ವರ ಮಹಾತ್ಮೆ ಯಕ್ಷಗಾನ ನಡೆಯಲಿದೆ.
ಅ.10 ರಂದು ಬೆಳಿಗ್ಗೆ ಪೂಜಾ ಕಾರ್ಯಕ್ರಮಗಳು.ಮದ್ಯಾಹ್ನ ಪೂಜೆ ನಡೆಯಲಿದೆ.ಮದ್ಯಾಹ್ನ ವಿವಿಧ ಸ್ಪರ್ಧಾ ಕಾರ್ಯಕ್ರಮ.ಸಂಜೆ ಸುರಭಿ ಬೈಂದೂರು ವಿದ್ಯಾರ್ಥಿಗಳಿಂದ ಗಾನ-ನೃತ್ಯ-ವೈಭವ,ರಾತ್ರಿ 10 ಗಂಟೆಗೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಹಾಸ್ಯಮಯ ನಗೆ ನಾಟಕ ವಾಚ್ ಮ್ಯಾನ್ ಪ್ರದರ್ಶನಗೊಳ್ಳಲಿದೆ.
ಅ.11 ರಂದು ಬೆಳಿಗ್ಗೆ ಚಂಡಿಕಾ ಹೋಮ,ವಿವಿಧ ಪೂಜಾ ವಿಧಿ ವಿಧಾನಗಳು,ಮದ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಫಲಾವಳಿಗಳ ಏಲಂ ಬಳಿಕ ವರ್ಣರಂಜಿತ ಪುರಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.