ಬೈಂದೂರು: ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘ(ರಿ.),ಆಡಳಿತ ಕಛೇರಿ,ಕಂದಾಯ ಭವನ ಬೆಂಗಳೂರು, ಕೇಂದ್ರ ಸಂಘದ ನಿರ್ದೇಶನ ದಂತೆ ರಾಜ್ಯದ ಪ್ರತಿ ತಾಲೂಕು ಕೇಂದ್ರದಲ್ಲೂ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದು ಬೈಂದೂರು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಅರ್ನಿಷ್ಟಾವಧಿ ಮುಷ್ಕರ ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಗಣೇಶ ಮೇಸ್ತ ಮಾತನಾಡಿ ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಐದಾರು ಗ್ರಾಮಗಳ ಜವಬ್ದಾರಿ ನೀಡಿರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸಾದ್ಯವಾಗದೆ ಒತ್ತಡದ ಬದುಕು ನಡೆಸುವಂತಾಗಿದೆ.ಸರಕಾರದ ಹತ್ತಾರು ಹೊಸ ತಂತ್ರಾಂಶಗಳ ಕೆಲಸವನ್ನು ಯಾವುದೆ ಸೌಲಭ್ಯ ನೀಡದೆ ನಿರ್ವಹಿಸುವ ಜೊತೆಗೆ ಸಿಬಂಧಿ ಕೊರತೆ,ಕಂದಾಯ ನಿರ್ವಹಣೆ,ಹತ್ತಾರು ಜವಬ್ದಾರಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹೇರಲಾಗಿದೆ.ಹೀಗಾಗಿ ನಮ್ಮ ಬೇಡಿಕೆ ಶೀಘ್ರವಾಗಿ ಈಡೇರಿಸುವವರಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಬೈಂದೂರು ತಹಶೀಲ್ದಾರ ಪ್ರದೀಪ ಆರ್.ರವರ ಮೂಲಕ ಮನವಿ ನೀಡಲಾಯಿತು.
ಉಪಾಧ್ಯಕ್ಷ ಸಂದೀಪ್ ಭಂಡಾರ್ಕರ್,ಪ್ರಧಾನ ಕಾರ್ಯದರ್ಶಿ ವೀರೇಶ್ ಹಾಗೂ ಬೈಂದೂರು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸರ್ವ ಸದಸ್ಯರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು