ಶಿರೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ,ಬೈಂದೂರು ಪ್ರಖಂಡ ಶಿರೂರು ಘಟಕ,ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ,ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ  ಇದರ ವತಿಯಿಂದ ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಉತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.

ಶಿರೂರಿನ ಹಿರಿಯ ವೈದ್ಯ ಡಾ.ಕೆ.ಪಿ ನಂಬಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ರಕ್ತದಾನ ಮಹಾದಾನ ಯುವತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು.ನಮ್ಮ ಒಂದೊಂದು ಹನಿರಕ್ತವು  ಒಂದೊಂದು ಜೀವವನ್ನು ಬದುಕಿಸುತ್ತದೆ ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ.ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ ಎಂದರು.

ಮುಖ್ಯ ಅತಿಥಿಗಳಾಗಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಭಟ್ಕಳ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗೇರ್,ಸಾಯಿನಾಥ ಜೋಗೂರು,ನಾಗರಾಜ ಪ್ರಭು ಶಿರೂರು ಉಪಸ್ಥಿತರಿದ್ದರು.

ವಿ.ಹಿ.ಪರಿಷತ್‌ನ ಗಿರೀಶ್ ದೇವಾಡಿಗ ಮೇಲ್ಪಂಕ್ತಿ ಸ್ವಾಗತಿಸಿದರು.ಶ್ರೀನಿವಾಸ ಮೂದೂರು ಕಾರ್ಯಕ್ರಮ ನಿರೂಪಿಸಿದರು.ಗಂಗಾಧರ ಬಿಲ್ಲವ ತೂದಳ್ಳಿ ವಂದಿಸಿದರು.

 

 

 

Leave a Reply

Your email address will not be published. Required fields are marked *

3 − 3 =