ಬೈಂದೂರು: ಮಹಿಳೆಯರ ಸೌಭಾಗ್ಯದಾಯಕವಾದ ಹಬ್ಬವಾದ ವರಮಹಾಲಕ್ಷ್ಮೀ ವೃತ ಆಚರಣೆ ಶಿರೂರು ಹಾಗೂ ಬೈಂದೂರಿನ ವಿವಿಧ ಕಡೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘ ಶಿರೂರು ಇದರ ಮಹಿಳಾ ಘಟಕದ ವತಿಯಂದ ವೀರಗಲ್ಲು  ಶ್ರೀ ವೀರ ಮಹಾಸತಿ ದೇವಸ್ಥಾನ ಪಡಿಯಾರಹಿತ್ಲುವಿನಲ್ಲಿ ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಯಿತು.

ಬೈಂದೂರಿನ ಪ್ರಸಿದ್ದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ವೃತ ಶುಕ್ರವಾರ ನಡೆಯಿತು.ದೇವಸ್ಥಾನದ ಅರ್ಚಕ ಬಿ.ಕೃಷ್ಣಮೂರ್ತಿ ನಾವಡ ಇವರ ನೇತ್ರತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ನಡೆಯಿತು.

ಸಪರಿವಾರ ಶ್ರೀ ಮಹಾಸತಿ ದೈವಸ್ಥಾನ ಮಾರ್ಕೆಟ್ ಶಿರೂರು ಇದರ ಮಹಿಳಾ ಘಟಕದ ವತಿಯಂದ ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಯಿತು.

ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು ಇದರ ವರಮಹಾಲಕ್ಷ್ಮಿ ವೃತ ಹಾಗೂ ಕಲಶ ಸ್ಥಾಪನೆ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.

ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಬಪ್ಪನಬಲುವಿನಲ್ಲಿ ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

News;Giri shiruru

Leave a Reply

Your email address will not be published.

9 − one =