ಶಿರೂರು; ವೃತ್ತಿಯಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಯಶಸ್ಸು ನೀಡುತ್ತದೆ.ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ.ಕರ್ತವ್ಯದ ಅವಧಿಯಲ್ಲಿ ಸಾಮಾಜಿಕ ಸ್ಪಂಧನೆ ಮತ್ತು ಹೊಸ ಚಿಂತನೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುತ್ತದೆ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಾಧವ ಟೀಚರ್ ರವರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಹೇಳಿದರು ಅವರು ಯುವಶಕ್ತಿ ಶ್ರೀ ಗಣೇಶೋತ್ಸವ (ರಿ.)ಕರಾವಳಿ ಶಿರೂರು,ಯುವಶಕ್ತಿ ಉತ್ಸವ ಸಮಿತಿ ಕರಾವಳಿ ಶಿರೂರು ಹಾಗೂ ಯಕ್ಷ ಸಂಪದ ಕಲಾಬಳಗ ಶಿರೂರು ಇದರ ವತಿಯಿಂದ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆದ ಇತ್ತೀಚೆಗೆ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಮಾಧವ ಬಿಲ್ಲವ ಕಾಳನಮನೆ ಯವರ ಅಭಿನಂದನಾ ಸಮಾರಂಭದಲ್ಲಿ ಈ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಮಾಧವ ಬಿಲ್ಲವ ಹಾಗೂ ಮೂಕಾಂಬು ದಂಪತಿಗಳನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠ್ಠಲ ಬಿಲ್ಲವ,ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್,ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ,ಹಿರಿಯರಾದ ಮಂಜು ಪೂಜಾರಿ ಕಾಳನಮನೆ,ಯುವಶಕ್ತಿ ಗೌರವಾಧ್ಯಕ್ಷ ಅಣ್ಣಪ್ಪ ಮೊಗೇರ್,ಮಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ ಉಪಸ್ಥಿತರಿದ್ದರು.

ಸದಸ್ಯರಾದ ಮೋಹನ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಿಕಟಪೂರ್ವ ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿದರು.ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವರದಿ/ಚಿತ್ರ: ಗಿರೀಶ್ ಶಿರೂರು

 

Leave a Reply

Your email address will not be published.

2 + twelve =