ಬೈಂದೂರು; .ಉಡುಪಿ ಜಿ.ಪಂ,ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ,ಪಶು ಆಸ್ಪತ್ರೆ ಬೈಂದೂರು,ಪಟ್ಟಣ ಪಂಚಾಯತ್ ಬೈಂದೂರು ಹಾಗೂ ಪ್ರಾಣಿ ದಯಾ ಸಂಘ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ರೋಗ(ನಿರೋಧಕ ಲಸಿಕಾ ಶಿಬಿರ)ಪಶು ಆಸ್ಪತ್ರೆ ಆವರಣ ಬೈಂದೂರಿನಲ್ಲಿ ನಡೆಯಿತು.
ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಶು ಸಂಗೋಪನಾ ಇಲಾಖೆ ಕೃಷಿಕರಿಗೆ ಮತ್ತು ಹೈನುಗಾರರಿಗೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಪರಿಸರ,ಪ್ರಾಣಿಗಳು ಮತ್ತು ಸಮಾಜದ ಹಿತದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅವುಗಳಲ್ಲಿ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಕೂಡ ಒಂದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿ ನವೀನ್,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಮಾಜಿ ಜಿ.ಪಂ ಸದಸ್ಯರಾದ ಶಂಕರ ಪೂಜಾರಿ,ಸುರೇಶ ಬಟ್ವಾಡಿ,ತಾ.ಪಂ ಸದಸ್ಯರಾದ ಮಾಲಿನಿ ಕೆ,ಶ್ಯಾಮಲ ಕುಂದರ್,ಬೈಂದೂರು ಪಶು ವೈದ್ಯಾಧಿಕಾರಿ ಡಾ.ನಾಗಾರಾಜ ಮರವಂತೆ,ಸಿಬಂದಿಗಳಾದ ರಾಘವೇಂದ್ರ,ಪ್ರಶಾಂತ ಕುಲಕರ್ಣಿ,ಪಾರ್ವತಿ,ನಿವೃತ್ತ ಪಶು ಪರೀಕ್ಷಕ ಕಾಳಿಂಗ ಕೊಠಾರಿ,ಶರತ್ ಕುಮಾರ್ ಶೆಟ್ಟಿ ಉಪ್ಪುಂದ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ವ್ಯಾಪ್ತಿಯ ಹೈನುಗಾರಿಕಾ ಫಲಾನುಭವಿಗಳಿಗೆ 40 ಕೌ ಮ್ಯಾಟ್ 20 ಫಲಾನುಭವಿಗಳಿಗೆ ಹಾಗೂ ಐದು ಫಲಾನುಭವಿಗಳಿಗೆ ಹುಲ್ಲು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಯಿತು.
ಪಶುವೈದ್ಯಾಧಿಕಾರಿ ಡಾ. ಹರೀಶ್ ಕೆ.ಪಿ ನಾಡಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
News/Girish shiruru