ಬೈಂದೂರು: ಬೈಂದೂರು ಕ್ಷೇತ್ರದ ಹಿಂದಿನ ಅಭಿವ್ರದ್ದಿ ಇತಿಹಾಸವನ್ನೊಮ್ಮೆ ಹಾಲಿ ಶಾಸಕರು ಮನನ ಮಾಡಿಕೊಳ್ಳಬೇಕಿದೆ.ಕೇವಲ ವಾಟ್ಸಾಪ್ ಫೇಸ್  ಬುಕ್ ಪ್ರಚಾರದ ಗೀಳಿನಿಂದ ಹೊರಬಂದು ಜನಸಾಮಾನ್ಯರ ಸಂಕಷ್ಟದ ಜತೆ ನಿಲ್ಲಬೇಕು.ಅವರ ಅಭಿವ್ರದ್ದಿ ಕಾರ್ಯಕ್ಕೆ ಸದಾ. ನಮ್ಮ ಬೆಂಬಲ ಇದೆ ಆದರೆ ರಾಜಕೀಯ ಹುನ್ನಾರದಲ್ಲಿ ಜನರ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ನಮ್ಮ ಖಂಡನೆ ಇದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು ಅವರು ಭಾನುವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬೈಂದೂರಿನ ಸರಕಾರಿ ಪದವಿ ಕಾಲೇಜಿನ ಅಧ್ಯಕ್ಷರು ಮಾನ್ಯ ಶಾಸಕರು.ಆದರೆ ಇದುವರಗೆ ಒಂದು ಸಭೆ ಕರೆಯಲು ಅವರಿಗೆ ಸಮಯ ಇಲ್ಲಾ .ಹೀಗಾದಾಗ ಸರಕಾರಿ ಕಾಲೇಜು ಅಭಿವ್ರದ್ದಿ ಹೇಗಾಗುತ್ತದೆ.ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವುದು ಹೇಗೆ ನಮ್ಮ ಅವಧಿಯಲ್ಲಿ ಬೈಂದೂರು ಪದವಿ ಕಾಲೇಜಿನಲ್ಲಿ ಸೀಟು ಪಡೆಯಲು ಪೈಪೋಟಿ ಇದ್ದಿತ್ತು ಅಷ್ಟೊಂದು ಸಂಖ್ಯೆಯಲ್ಲ ವಿದ್ಯಾರ್ಥಿಗಳಿದ್ದರು ಈಗ ಎಲ್ಲರು ಖಾಸಗಿ ಕಾಲೇಜಿಗೆ ಹೋಗುತ್ತಿದ್ದಾರೆ.ಶಾಸಕರು ಸಭೆಯ ಕರೆಯದಿದ್ದರೆ ಕಾಲೇಜು ಅಭಿವ್ರದ್ದಿ ಆಗದೆ ಪರೋಕ್ಷವಾಗಿ ಖಾಸಗಿ ಕಾಲೇಜುಗಳಿಗೆ ಸಹಕರಿಸಿದಂತಿದೆ ಎಂದರು.

ಶಾಸಕರು ಅಧಿಕಾರಿಗಳನ್ನು ಬಿಜೆಪಿ ಕಾರ್ಯಕರ್ತರೆಂದು ತಿಳಿದಿದ್ದಾರೆ; ಬೈಂದೂರಿನಲ್ಲಿ ಸರಕಾರದ ಶಾಸಕರ ಭವನ ಇದೆ ಸಾಮಾನ್ಯವಾಗಿ ಅಧಿಕಾರಿಗಳು ಶಾಸಕರ ಕಛೇರಿಯಲ್ಲಿ ಸಭೆ ನಡೆಸಿದಾಗ ಹಾಜರಾಗುವುದು ಗೌರವ ಆದರೆ ಬೈಂದೂರು ಶಾಸಕರು ತಮ್ಮ ಪಕ್ಷದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ಕರಯುವುದು ಸಮಂಜಸವಲ್ಲ ಮತ್ತು ಅಧಿಕಾರಿಗಳು ಪಕ್ಷದ ಕಛೇರಿಯಲ್ಲಿ ಸಭೆಗೆ ಭಾಗವಹಿಸಲು ಅವರು ಬಿಜಪಿ ಕಾರ್ಯಕರ್ತರಲ್ಲ ಎನ್ನುವುದನ್ನು ಶಾಸಕರು ತಿಳಿದುಕೊಳ್ಳಬೇಕು ಎಂದರು.

ಸೊಮೇಶ್ವರ ಗುಡ್ಡ ಕುಸಿತ ಪ್ರಕರಣ ಹಿಂದೆ ಬಾರಿ ಅವ್ಯವಹಾರ; ಸೊಮೇಶ್ವರ ಗುಡ್ಡದಲ್ಲಿ ರಸ್ತೆ ನಿರ್ಮಿಸಲು ಖಾಸಗಿಯವರು ಅನುಮತಿ ಕೇಳಿದಾಗ ಗಣಿ ಇಲಾಖೆ ಈ ಭಾಗದಲ್ಲಿ. ರಸ್ತೆ ನಿರ್ಮಿಸಲು ಅನುಮತಿ ನೀಡಬಾರದು ಒಂದೊಮ್ಮೆ ರಸ್ತೆ ನಿರ್ಮಿಸಿದರೆ ಗುಡ್ಡ ಕುಸಿಯುವ ಸಾದ್ಯತೆ ಇದೆ ಎಂದು ಪ.ಪಂ ಗೆ ತಿಳಿಸಿದ್ದರು ಕೂಡ ಪ.ಪಂ ಎನ್ ಓ ಸಿ ನೀಡಿದೆ.ಅಂದರೆ ಇದರ ಹಿಂದೆ ದೊಡ್ಡ ಅವ್ಯವಹಾರ ಹಾಗೂ ರಾಜಕೀಯ ಹಸ್ತಕ್ಷೇಪ ಇದೆ ನಿನ್ನೆ ಜಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದ್ದು ಅವರು ಕೂಡ ಬೇಟಿ ನೀಡಿದ್ದಾರೆ.ಈ ಬಗ್ಗೆ ಸಮಗ್ರ ತನಿಖೆ ನಡೆಸಲು ತಿಳಿಸಿದ್ದು ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದರು.

ಕೊಲ್ಲೂರು ಆಡಿಯೊ ಬಾಂಬ್ ಪ್ರಕರಣ ದಾಖಲಿಸಲಾಗಿದೆ; ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಕುರಿತು ಆಡಿಯೊ ಬಾಂಬ್ ಬಾರಿ ಸುದ್ದಿ ಮಾಡಿದೆ ಈ ಕುರಿತು ಪ್ರತಿಕ್ರಯಿಸಿ ಕೆಲವು ತಾಂತ್ರಿಕ ಅಂಶ ಪೂರ್ಣಗೊಂಡರೆ ಸೋಮವಾರ ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಪೂರ್ಣಗೊಳ್ಳಲಿದೆ.ಇದರ ನಡುವೆ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಅರ್ಚಕರು ನನ್ನ ಕುರಿತು ಸರಕಾರದ ಹಾಗೂ ಮಾಜಿ ಶಾಸಕರು ಉಪಮುಖ್ಯಮಂತ್ರಿಗಳ ಕುರಿತು ಹಗುರವಾಗಿ ಮಾನಹಾನಿಕರ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ನಿಲುವು ತಗೆದುಕೊಳ್ಳಲಾಗುವುದು ಎಂದರು

ಈ ಸಂಧರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಮೆಶ ಗಾಣಿಗ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ,ಜಿ.ಪಂ ಮಾಜಿ ಸದಸ್ಯ ಶಂಕರ ಪೂಜಾರಿ ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

 

 

Leave a Reply

Your email address will not be published.

four + 12 =