ಬೈಂದೂರು: ಪ್ರಾಕ್ರತಿಕ ವಿಕೋಪ ಸೇರಿದಂತೆ ಯಾವುದೆ ಅವಘಡದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಣ್ಣ ಸುಳಿವು ಸಿಕ್ಕರೂ ಸಹ ಗಂಭೀರವಾಗಿ ಪರಿಗಣಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆನ್ನುವುದು ರಾಜ್ಯ ಸರಕಾದ ನಿರ್ಧೇಶನ.ಉತ್ತರಕನ್ನಡ ಬೆಂಗಳೂರು ಮಾರ್ಗ ಸೇರಿದಂತೆ ಹತ್ತಾರು ಕಡೆ ಗುಡ್ಡ ಕುಸಿತ ನಿತ್ಯ ವರದಿಯಾಗುತ್ತಿದೆ.ಮಳೆಯ ಅಬ್ಬರಕ್ಕೆ ಯಾವುದೆ ಕ್ಷಣಕ್ಕೂ ಎಲ್ಲಿ ಕೂಡ ಅಪಾಯ ಸಂಭವಿಸಬಹುದು.ಆದರೆ ಬೈಂದೂರಿನಲ್ಲಿ ಮಾತ್ರ ಯಾವುದೆ ಅವಘಡಗಳು ಹಗಲು ಮಾತ್ರ ಸಂಭವಿಸುತ್ತದೆ.ರಾತ್ರಿ ವೇಳೆ ರಜೆ ತೆಗೆದುಕೊಳ್ಳುತ್ತದೆ ಎಂದು ತೀರ್ಮಾನಿಸಿದಂತಿದೆ ಮತ್ತು ಸಾರ್ವಜನಿಕ ವಲಯದಲ್ಲು ಈ ನಿರ್ಲಕ್ಷಕ್ಕೆ ಬಾರಿ ಆಕ್ರೋಶ ವ್ಯಕ್ತವಾಗಿದೆ
ಇಲ್ಲಿನ ಸೋಮೇಶ್ವರ ಗುಡ್ಡ ಖಾಸಗಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಿಸಲು ಗುಡ್ಡ ಕೊರೆದ ಪರಿಣಾಮ ಕುಸಿಯುವ ಬೀತಿಯಲ್ಲಿದೆ.ಈ ಬಗ್ಗೆ ವರದಿಯಾಗುತಿದ್ದಂತೆ ದೌಡಾಯಿಸಿದ ಅಧಿಕಾರಿಗಳು ಬುಧವಾರ ಮುಂಜಾಗ್ರತೆ ವಹಿಸಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದರು ಇದೆಲ್ಲಾ ಹಗಲು ವೇಳೆ ನಡೆದಿತ್ತು ಆದರೆ ರಾತ್ರಿ ಯಾಗುತ್ತಿದ್ದಂತೆ ಸಂಚಾರ ಮಾಮೂಲಾಗಿತ್ತು.ಕನಿಷ್ಟ ಪಕ್ಷ ಹೋಮ್ ಗಾರ್ಡ್ ಕೂಡ ಇದ್ದಿಲ್ಲ.ಹೀಗಾಗಿ ಈ ಗುಡ್ಡ ಅಧಿಕಾರಿಗಳು ಡ್ಯೂಟಿಯಲ್ಲಿದ್ದಾಗ ಮಾತ್ರ ಮಾಹಿತಿ ನೀಡಿ ಕುಸಿಯಬಹುದೆಂದು ಜನರಾಡಿಕೊಳ್ಳುತ್ತಿದ್ದಾರೆ.
ಎ.ಸಿಗಾಗಿ ಸಂಜೆವರಗೆ ಕಾಯ್ದ ಜನರು: ಸಂಜೆ ವೇಳೆ ಸ್ಥಳಕ್ಕೆ ಎ.ಸಿಯವರು ಬರುತ್ತಾರೆ ಎಂದು ಬಾರಿ ಸಂಂಖ್ಯೆಯಲ್ಲಿ ಸ್ಥಳೀಯರು ಕಾದಿದ್ದರು ಆದರೆ ಸಂಜೆ ಎಸಿ ಯವರು ಸ್ಥಳಕ್ಕಾಗಮಿಸಿಲ್ಲ.ಗುರುವಾರ ಮುಂಜಾನೆ ಬೇಟಿ ನೀಡಿದ್ದಾರೆ.ಈ ಬಗ್ಗೆ ಪ್ರತಿಕ್ರಯಿಸಿದ ಕೆಡಿಪಿ ಸದಸ್ಯ ಶೇಖರ್ ಪೂಜಾರಿ ಪಟ್ಟಣ ಪಂಚಾಯತ್ ಹಾಗೂ ಎಲ್ಲ ಅದಿಕಾರಿಗಳು ಒತ್ತಡ ಹಾಗೂ ಉದ್ಯಮಿಯ ಅಮಿಷಕ್ಕೆ ಒಳಗಾಗಿ ಅನುಮತಿ ನೀಡಿದ್ದಾರೆ.ಮಾತ್ರವಲ್ಲದೆ ಪ್ರಭಾವಿ ವ್ಯಕ್ತಿ ಗುಡ್ಡ ಕೊರೆದ ಕಾರಣ ಅಧೀಕಾರಿಗಳು ಕೂಡ ಕ್ರಮ ಜರಗಿಸಲು ಸ್ಥಳಕ್ಕೆ ಬೇಟಿ ನೀಡಲು ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ.ಕನಿಷ್ಟ ಸಾರ್ವಜನಕರ ಅಹವಾಲು ಕೇಳಲು ಸಿದ್ದರಿಲ್ಲ.ಮುಖ್ಯ ಅಧಿಕಾರಿಗಳು ಮಳೆಗಾಲದಲ್ಲಿ ಕೇಂದ್ರ ಸ್ಥಾನದಲ್ಲೆ ಇಲ್ಲಾ.ಒಂದೊಮ್ಮೆ ಅವಘಡ ಸಂಭವಿಸಿದರೆ ಇದಕ್ಕೆ ಇಲಾಖೆಯ ನಿರ್ಲಕ್ಷವೆ ಕಾರಣ ಸಕಾರಾತ್ಮಕವಾಗಿ ಸ್ಪಂಧಿಸದಿದ್ದರೆ ಸಾರ್ವಜನಿಕರು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಗುಡ್ಡದ ಮೇಲ್ಗಡೆ ನಿಮಾ೯ಣವಾಗುತ್ತಿರುವ ಕಟ್ಟಡ.
ಕಟ್ಟಡ ಮಾಲಿಕರಿಗೆ ನೊಟೀಸ್ : ಪ.ಪಂ.ಇಲ್ಲಿನ ಗುಡ್ಡ ಕೊರೆದು ರಸ್ತೆ ನಿರ್ಮಿಸುತ್ತಿರುವ ಉದ್ಯಮಿಗೆ ನೊಟೀಸ್ ನೀಡಿದೆ ಮತ್ತು ಕಟ್ಟಡ ಪರವಾನಗಿ ತಾತ್ಕಾಲಿಕವಾಗಿ ತಡೆಹಿಡಿದಿದೆ
ಅವಘಡಕ್ಕೆ ಅಧೀಕಾರಿಗಳೆ ಹೊಣೆ:ಗಂಟಿಹೊಳೆ; ಸೊಮೇಶ್ವರ ಗುಡ್ಡ ಕುಸಿತಕ್ಕೆ ಅದಿಕಾರಿಗಳ ನಿರ್ಲಕ್ಷ ಕಾರಣ ಹಾಗೂ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ ಎನ್ನುವುದು ಸ್ಥಳೀಯರಿಂದ ಕೇಳಿ ಬರುತ್ತಿದೆ.ಹೀಗಾಗಿ ಒಂದೊಮ್ಮೆ ಅವಘಡ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.ಮಳೆ ಪ್ರಮಾಣ ಅಧಿಕವಾಗಿದ್ದು ಗುಡ್ಡದ ಮಣ್ಣು ಕರಗಿ ರಸ್ತೆಗೆ ಬರುತ್ತಿದ್ದು ಮೇಲ್ಬಾಗದ ಕಟ್ಟಡ ಕೂಡ ಕುಸಿಯುವ ಬೀತಿಯಲ್ಲಿದೆ ಒಟ್ಟಾರೆಯಾಗಿ ಅಭಿವ್ರದ್ದಿಯ ಹೆಸರಿನಲ್ಲಿ ಪವಿತ್ರ ಸೊಮೇಶ್ವರ ಗುಡ್ಡ ವಿರೂಪಗೊಳಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಉದ್ಯಮಿಗಳಿಗೆ ಜನರು ಹಿಡಿಶಾಪ ಹಾಕುತಿದ್ದಾರೆ.
ಗುಡ್ಡ ಕುಸಿತ ಸ್ಥಳಕ್ಕೆ ಗುರುವಾರ ಮುಂಜಾನೆ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಆರ್,ಬೈಂದೂರು ತಹಶೀಲ್ದಾರ ಪ್ರದೀಪ್ ಆರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ/ಚಿತ್ರ: ಗಿರಿ ಶಿರೂರು