ಅಂಕೋಲಾ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದೆ.ಗುಡ್ಡ ಕುಸಿತ ಅಬ್ಬರಕ್ಕೆ ಹೆದ್ದಾರಿ ಪಕ್ಕದ ಟೀ ಸ್ಟಾಲ್ ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಹಾನಿಯಾಗಿದೆ .ಐದಕ್ಕೂ ಅಧಿಕ ಜನಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ನಿಖರ ಮಾಹಿತಿ ದೊರೆಯಬೇಕಿದೆ.
ಕೊಚ್ಚಿಹೋದ ಟ್ಯಾಂಕರ್ :ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ ಗ್ಯಾಸ್ ಟ್ಯಾಂಕರ್ ವಾಹನ,ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಾರಿ ಮತ್ತಿತರ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ . ಹಠಾತ್ ಗುಡ್ಡ ಕುಸಿದು ಮಣ್ಣು ನದಿಯಲ್ಲಿ ಜೋರಾಗಿ ಜರಿದ ಪರಿಣಾಮ ಗಂಗಾವಳಿ ನದಿ ಪಾತ್ರದ ಪಕ್ಕದ ದಡದ ಮನೆಯೂ ಕೊಚ್ಚಿಹೋಗಿದೆ ಎನ್ನಲಾಗಿದೆ.
ಪೊಲೀಸ್ ಅಗ್ನಿ ಶಾಮಕ,ಎನ್‌ಹೆಚ್ಎಐ ಸುರಕ್ಷತಾ ಅಂಬುಲೆನ್ಸ್ ಮತ್ತಿತರ ಸ್ಥಳದಲ್ಲಿ ರಕ್ಷಣಾ ಕಾದ್ಯದಲ್ಲಿ ತೊಡಗಿದ್ದಾರೆ.ಮಳೆ ಹೆಚ್ಚಿರುವ ಕಾರಣ ಮತ್ತಷ್ಟು ಗುಡ್ಡ ಕುಸಿವ ಭೀತಿ ಇರುವುದರಿಂದ,ಸಂಬಂಧಿತ ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ,ಸ್ಥಳೀಯರ ಹಾಗೂ ಹೆದ್ದಾರಿ ಸಂಚರಿಗಳ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ,ಹೆದ್ದಾರಿ ಎರಡು ಕಡೆ ವಾಹನಗಳು ಸಾಲುಮಟ್ಟಿ ನಿಂತಿವೆ. ಗುಡ್ಡ ಕುಸಿತದಿಂದ ಪ್ರಾಣ ಹಾನಿ ಮತ್ತಿತರ ಹಾನಿಯಾಗಿರುವ ಸಾಧ್ಯತೆ ಇದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ.ಕಳೆದ ಎರಡು ವರ್ಷಗಳಿಂದ ಈಭಾಗದಲ್ಲ ನಿರಂತರ ಗುಡ್ಡ ಕುಸಿತವಾಗಿದ್ದು ಈ ಬಾರಿ ದೊಡ್ಡ ಪ್ರಮಾಣದ ಹಾನಿ ಆಗಿರುವ ಸಾದ್ಯತೆ ಇದೆ ಎನ್ನುವುದು ಸ್ಥಳೀಯರ ಅಬಿಪ್ರಾಯವಾಗಿದೆ.