ಶಿರೂರು: ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ವತಿಯಿಂದ ಸಭೆ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಈಗಾಗಲೇ ಪ್ರಸ್ತುತ ಹೆಜಮಾಡಿ ಮುಂತಾದ ಕಡೆ ಸ್ಥಳೀಯರಿಗೆ ನೀಡಿರುವ ರಿಯಾಯತಿ ಹಿಂಪಡೆಯುತ್ತಿರುವ ಮಾಹಿತಿ ಮತ್ತು ಶಿರೂರು ಟೋಲ್ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗಿರುವ ರಿಯಾಯತಿ ಹಿಂಪಡೆಯುವ ಸುದ್ದಿ ಹಿನ್ನೆಲೆಯಲ್ಲಿ ಐ.ಆರ್.ಬಿ ಕಂಪೆನಿ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಶಿರೂರಿನ ಸ್ಥಳೀಯರಿಗಿರುವ ರಿಯಾಯತಿ ಹಿಂಪಡೆಯಬಾರದು ಮತ್ತು ಇಂತಹ ನಿರ್ಣಯಗಳಿದ್ದರೆ ಸ್ಥಳೀಯ ಸಮಿತಿ ಜೊತೆ ಮಾಹಿತಿ ನೀಡಿ ನಿರ್ಣಯ ಕೈಗೊಳ್ಳಬೇಕು.ಮಳೆಗಾಲ ಆರಂಭವಾಗುತ್ತಿರುವ ಕಾರಣ ಸೂಕ್ತ ಮುಂಜಾಗೃತೆ ವಹಿಸಬೇಕು.ಹೆದ್ದಾರಿ ಇಕ್ಕೆಲಗಳಲ್ಲಿ ಚರಂಡಿಗಳಿಲ್ಲದೆ ಕಳೆದ ವರ್ಷ ಬಹುತೇಕ ಮನೆಗಳು ನೀರು ತುಂಬಿರುವುದು,ಬೀದಿ ದೀಪ ಸಮಸ್ಯೆ, ಸರ್ವಿಸ್ ರಸ್ತೆ ಮತ್ತು ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಗೆ ಮಾನ್ಯತೆ ಮತ್ತು ಅವಕಾಶ ನೀಡಬೇಕು.ಶಿರೂರಿನ ಬಪ್ಪನಬೈಲು ಮತ್ತು ಇತರ ಕಡೆ ಬಹುವರ್ಷದಿಂದ ನೀಡಿದ ಹಲವು ಭರವಸೆಗಳನ್ನು ಶೀಘ್ರ ಈಡೇರಿಸಬೇಕು.ಪ್ರಥಮ ಹಂತದಲ್ಲಿ ಟೋಲ್ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಬಳಿಕ ಸಂಸದರು,ಶಾಸಕರು,ಮಾಜಿ ಶಾಸಕರು,ಸಚಿವರುಗಳಿಗೆ,ಅಧಿಕಾರಿಗಳಿಗೆ ಮನವಿ ನೀಡಲು ನಿರ್ಧರಿಸಲಾಯಿತು.ಮೇ.30 ರಂದು ಗುರುವಾರ ಬೆಳಿಗ್ಗೆ 10:30ಕ್ಕೆ ಶಿರೂರು ಟೋಲ್ ಗೇಟ್ ವ್ಯವಸ್ಥಾಪಕರಿಗೆ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ನೀಡಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಶಿರೂರಿನ 5 ಕಿಲೋ ಮೀಟರ್ ವ್ಯಾಪ್ತಿಯ ವಾಹನ ಮಾಲಕರು ತಮ್ಮ ವಾಹನದ ಆರ್.ಸಿ ಪ್ರತಿ ಹಾಗೂ ಡ್ರೈವಿಂಗ್ ಲೈಸನ್ಸ್ ಪ್ರತಿ ತರಬೇಕು ಹಾಗೂ ನೊಂದಣಿ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.