ಬೈಂದೂರು: ರಾಷ್ಟ್ರಭಕ್ತ ಬಳಗ ಬೈಂದೂರು ಇದರ ವತಿಯಿಂದ ಬ್ರಹತ್ ವಿಜಯ ಸಂಕಲ್ಪ ಸಮಾವೇಶ ಕಿರಿಮಂಜೇಶ್ವರದಲ್ಲಿ ನಡೆಯಿತು.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯ ಮಟ್ಟದ ನಾಯಕರನ್ನು,ಸಿನಿಮಾ ನಟರನ್ನು ಕರೆದು ಪ್ರಚಾರ ನಡೆಸುತ್ತಿದೆ.ಆದರೆ ರಾಷ್ಟ್ರಭಕ್ತ ಸಂಘಟನೆಯ ಈಶ್ವರಪ್ಪ ಬಳಗಕ್ಕೆ ಸಾಮಾನ್ಯ ಕಾರ್ಯಕರ್ತರೆ ಸ್ಟಾರ್ ಪ್ರಚಾರಕರಾಗಿದ್ದಾರೆ.ರಾಜ್ಯದಲ್ಲಿ ಹಿಂದುಗಳ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ.ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಹಿಂದುತ್ವದ ಬಗ್ಗೆ ಆಸಕ್ತಿ ಇಲ್ಲಾ.ಚುನಾವಣೆಗೆ ಮಾತ್ರ ಹಿಂದುತ್ವದ ಹೆಸರು ಹೇಳುತ್ತಾರೆ.ರಕ್ಷಣೆ ನೀಡಬೇಕಾದ ಸರಕಾರ ನಿಷ್ಕ್ರಿಯವಾಗಿದೆ.ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೋವಿನ ಶಾಪ ತಟ್ಟದಿರಲಾರದು.ಮಂತ್ರಿ ನೀಡುವುದಾಗಿ ಕರೆದು ಮೋಸ ಮಾಡಿದ್ದಾರೆ.ಹಿಂದುತ್ವದ ಕುರಿತು ಧ್ವನಿ ಎತ್ತುವವರನ್ನು ಮೂಲೆಗುಂಪು ಮಾಡಿದ ಬಿಜೆಪಿ ಕರ್ನಾಟಕದಲ್ಲಿ ಅಪ್ಪ -ಮಕ್ಕಳ ಕಪಿಮುಷ್ಟಿಯಲ್ಲಿ ಬಿಜೆಪಿ ನಲುಗಿದೆ ಎಂದರು.
ವೇದಿಕೆಯಲ್ಲಿ ಆರತಿ,ಸುವರ್ಣ ಶಂಕರ್, ಸೀತಾಲಕ್ಷ್ಮೀ,ಮೋಹನ ಖಾರ್ವಿ ಉಪ್ಪುಂದ,ವಿನೋದರಾಜ್ ಖಾರ್ವಿ,ಜಗದೀಶ ಖಾರ್ವಿ,ಧನು,ಜಗನ್ನಾಥ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ, ಕಾರ್ಮಿಕರಾದ ನಾಗರಾಜ ಪೂಜಾರಿ,ಸುರೇಶ ಪೂಜಾರಿ,ಮಂಗಳ,ಕೋಮಲ ಶೈಲಜಾ ರವರನ್ನು ಗೌರವಿಸಲಾಯಿತು ಹಾಗೂ ಮುಳುಗು ತಜ್ಞ ದಿನೇಶ ಖಾರ್ವಿ ಯವರನ್ನು ಸಮ್ಮಾನಿಸಲಾಯಿತು.
ರಾಷ್ಟ್ರಭಕ್ತ ಬಳಗದ ಮುಖಂಡ ಕೃಷ್ಣ ಬಿಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಮೇಶ ಬಿಜೂರು ಸ್ವಾಗತಿಸಿದರು.ಮಹೇಶ ಶೇಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/Pic: Giri shiruru