ಶಿರೂರು : ಶ್ರೀ ಗಣೇಶ ಸೇವಾ ಸಂಘ (ರಿ.)ಚಾರೋಡಿ ಮೇಸ್ತ ಸಮಾಜ ಹಡವಿನಕೋಣೆ ಶಿರೂರು ಇದರ 41ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಾರೋಡಿ ಮೇಸ್ತ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಗಣೇಶ ಸೇವಾ ಸಂಘದ ವೇದಿಕೆಯಲ್ಲಿ ನಡೆಯಿತು.

ಶ್ರೀ ಗಣೇಶ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಜಿ.ಮೇಸ್ತ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷ ರಾಮಚಂದ್ರ ಬಿ.ಶಿರೂರಕರ್,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಕಾವೇರಿ ಶೋರೂಂ ಮಾಲಕ ನಾರಾಯಣ ಬಿ.ಪಟೇಲ್,ಶಂಕರ ವಿ.ಮೇಸ್ತ,ಜಯಗಣೇಶ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ ಆರ್.ಮೇಸ್ತ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಡಾಟಾ ಮ್ಯಾನೇಜರ್ ನಿತ್ಯಾನಂದ ಎನ್.ಮೇಸ್ತ,ಕಂಬಳ ಕುವರಿ ಚೈತ್ರ ಪರಮೇಶ್ವರ ಭಟ್ ಹಾಗೂ ಅನ್ನದಾನದ ಸೇವಾಕರ್ತರನ್ನು ರವರನ್ನು ಸಮ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಾರೋಡಿ ಮೇಸ್ತ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಶ್ರೀ ಗಣೇಶ ಯುವಕ ಮಿತ್ರ ಮಂಡಳಿ ಅಧ್ಯಕ್ಷ ಅಣ್ಣಪ್ಪ ವಿ.ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂತೋಷ ಬಿ.ಮೇಸ್ತ ಸ್ವಾಗತಿಸಿದರು.ಸೌಮ್ಯ ಎಮ್.ಮೇಸ್ತ ಹಾಗೂ

ರಾಮನಾಥ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.ಶ್ರೀಧರ ಎಮ್.ಮೇಸ್ತ ವಂದಿಸಿದರು.

 

Leave a Reply

Your email address will not be published. Required fields are marked *

nine − one =