ಶಿರೂರು: ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ,ಶಿರೂರು ಗ್ರಾಮ ಸಮಿತಿ,ಎಸ್.ಡಿ.ಪಿ.ಐ ಶಿರೂರು,ಬ್ಲಡ್ ಬ್ಯಾಂಕ್ ಅಜ್ಜರಕಾಡು ಹಾಗೂ ಜಿಲ್ಲಾಸ್ಪತ್ರೆ ಉಡುಪಿ ಇದರ ಸಹಭಾಗಿತ್ವದಲ್ಲಿ ಬ್ರಹತ್ ರಕ್ತದಾನ ಶಿಬಿರ ಸ.ಪ.ಪೂ ಕಾಲೇಜು ಶಿರೂರಿನಲ್ಲಿ ನಡೆಯಿತು.
ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಸ್ವ-ಪ್ರೇರಣೆಯಿಂದ ರಕ್ತದಾನ ಮಾಡುವುದರಿಂದ ಜೀವನ್ಮರಣ ಹೋರಾಟದಲ್ಲಿರುವ ಪ್ರಾಣ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ.ರಕ್ತದಾನಕ್ಕೆ ವಿಶೇಷವಾದ ಪ್ರಾಮುಖ್ಯವಿದೆ.ಸಂಘ ಸಂಸ್ಥೆಗಳು ಇಂತಹ ಶಿಬಿರಗಳಿಂದ ಸಾಮಾಜಿಕ ಕಾಳಜಿ ಹೊಂದಿದಾಗ ರಕ್ತದಾನಕ್ಕೆ ಇನ್ನಷ್ಟು ಮನ್ನಣೆ ದೊರೆಯ್ತುದೆ ಎಂದರು.
ಈ ಸಂದರ್ಭದಲ್ಲಿ ಸ.ಪ.ಪೂ ಕಾಲೇಜಿನ ಉಪಪ್ರಾಂಶುಪಾಲ ಬೊಮ್ಮಯ್ಯ ಗಾಂವ್ಕರ್,ವೈದ್ಯಾಧಿಕಾರಿ ಸುಹೈಲ್ ಎಚ್.ಎಸ್,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಬಾವುದ್ದೀನ್ ಮೌಲಾನ,ಎಚ್.ಎಸ್ ಸಿದ್ದಿಕ್,ಸಿದ್ದಿಕ್ ಗಂಗೊಳ್ಳಿ,ವೈದ್ಯಾಧಿಕಾರಿ ಮಂಜುಶ್ರೀ ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯ ಶೋಯಬ್ ಅರೆಹೊಳೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಅಜ್ಮತುಲ್ಲಾ ವಂದಿಸಿದರು.