ಶಿರೂರು; ಸತ್ಕಾರ್ಯಗಳು ಸಮಾಜಕ್ಕೆ ಶ್ರೇಯಸ್ಸು ನೀಡುತ್ತದೆ.ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ,ಭಕ್ತಿಯಿಂದ ಸಂಪನ್ನಗೊಂಡಾಗ ಭಗವಂತ ಸುಪ್ರೀತನಾಗಿ ಊರು ಸಮೃದ್ದಗೊಳ್ಳುತ್ತದೆ.ಗ್ರಾಮೀಣ ಭಾಗದಲ್ಲಿ ಜನರ ಮುಗ್ದತೆ ಮತ್ತು ಪ್ರಾಮಾಣಿಕತೆ ಭಗವಂತನೊಂದಿಗೆ ನೇರ ಸಂವಹನವಾಗುತ್ತದೆ.ಧಾರ್ಮಿಕ ಕ್ಷೇತ್ರಗಳು ಅಭಿವೃದ್ದಿಯಾದಂತೆ ಸುಖಃಶಾಂತಿ ಹೆಚ್ಚುತ್ತದೆ ಎಂದು ವತ್ತಿನಕಟ್ಟೆ ಶ್ರೀಮಹಾಸತಿ ದೇವಸ್ಥಾನದ ಪ್ರಧಾನ ಅರ್ಚಕ ಬಿ.ಕೃಷ್ಣಮೂರ್ತಿ ನಾವಡ ಹೇಳಿದರು ಅವರು ಶ್ರೀ ಬೀರೇಶ್ವರ ದೇವಸ್ಥಾನ ಕಡ್ಕೆ ಯಡ್ತರೆ ಇದರ ರಜತ ಮಹೋತ್ಸವ ಸಂಭ್ರಮ -2024 ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿದರು.
ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗವಾದ ಕಡ್ಕೆಯಲ್ಲಿ ಜನರ ಸಂಘಟನೆ ಮತ್ತು ಸಮುದಾಯದ ಕುರಿತು ಇರುವ ಕಾಳಜಿ ಈ ಊರಿನ ಅಭಿವೃದ್ದಿಯನ್ನು ಬಿಂಬಿಸುತ್ತದೆ.ಜನರ ಪ್ರಯತ್ನದ ಜೊತೆಗೆ ಆ ಊರಿನ ದೈವ,ದೇವರುಗಳ ಕೃಪೆ ಮತ್ತು ಆಶೀರ್ವಾದ ಊರಿಗೆ ಶ್ರೇಯಸ್ಸು ದೊರಕಿಸಿಕೊಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊರಾಡಿ ಶ್ರೀ ವನದುರ್ಗಾ ದೇವಸ್ಥಾನದ ಅರ್ಚಕ ಗುರುಪ್ರಸಾದ್ ಭಟ್,ಕೋಟೇಶ್ವರ ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ.ವೆಂಕಟರಮಣ ಭಟ್ ನೆಂಪು,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಮಾಜಿ ಗ್ರಾ.ಪಂ ಸದಸ್ಯ ಜೈಸನ್ ಮದ್ದೋಡಿ,ಬೀರೇಶ್ವರ ಸೇವಾ ಸಂಘದ ಮಾಜಿ ಅಧ್ಯಕ್ಷ ಗೋವಿಂದ ಎಮ್.ಗೊಂಡ,ಹಿರಿಯರಾದ ನಾರಾಯಣ ಗೊಂಡ ಜನ್ಮನೆ,ಕಾರ್ಯದರ್ಶಿ ಉಮೆಶ್ ಎಸ್.ಗೊಂಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪರಮಯ್ಯ ಎಸ್.ಗೊಂಡ,ಆರ್.ಎನ್ ಗೊಂಡ ರವರನ್ನು ಸಮ್ಮಾನಿಸಲಾಯಿತು,ಅನ್ನದಾನದ ಸೇವಾಕರ್ತರನ್ನು ಹಾಗೂ ದಾನಿಗಳನ್ನು ಗೌರವಿಸಲಾಯಿತು.
ಬೀರೇಶ್ವರ ಸೇವಾ ಸಂಘದ ಅಧ್ಯಕ್ಷ ಗೋವಿಂದ ಎನ್.ಗೊಂಡ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕ ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.ಸುರೇಶ್ ಗೊಂಡ ವಂದಿಸಿದರು.
News/Giri shiruru
pic/Deepak shiruru