ಬೈಂದೂರು: ಕಲೆ,ಸಂಸ್ಕ್ರತಿ ಹಾಗೂ ಸಾಹಿತ್ಯದಲ್ಲಿ ಬೈಂದೂರಿನ ಕೊಡುಗೆ ಅಪಾರವಾಗಿದೆ.ಸುರಭಿ ಸಂಸ್ಥೆ ನಿರಂತರ ಸಾಂಸ್ಕ್ರತಿಕ ಹಾಗೂ ರಂಗಭೂಮಿ ಚಟುವಟಿಕೆ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುವ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವ ಪರಿಶ್ರಮ ಅಭಿನಂದನೀಯವಾಗಿದೆ.ಸುರಭಿ ಜೈಸಿರಿ ಬೈಂದೂರಿನ ಸಾಂಸ್ಕ್ರತಿಕ ಮೈಲುಗಲ್ಲು ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಸುರಭಿ ಆಶ್ರಯದಲ್ಲಿ ನಡೆದ ಸುರಭಿ ಜೈಸಿರಿ ಬಿಂದುಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಸುರಭಿ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಪಿ.ಯಡ್ತರೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೀವವಿಮಾ ಅಧಿಕಾರಿ.ಸೋಮನಾಥನ್ ಆರ್,ಕೋಟೇಶ್ವರ ಸಹನಾ ಗ್ರೂಫ್ ಮ್ಯಾನೇಜಿಂಗ್ ಟ್ರಸ್ಟಿ ಸಹನಾ ಸುರೇಂದ್ರ ಶೆಟ್ಟಿ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಅನಿತ ಆರ್.ಕೆ,ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಭು ಶಿರೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಶ್ರೀಧರ ಪಿ ಹಾಗೂ ಯಕ್ಷಗಾನ ಕಲಾವಿ ಮಹಮ್ಮದ್ ಗೌಸ್ ಕಾವರಾಡಿ ಯವರನ್ನು ಸುರಭಿ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಸುರಭಿ ಸಂಚಾಲಕ ಸುಧಾಕರ್ ಪಿ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಭಾಸ್ಕರ್ ಬಾಡ ಸ್ವಾಗತಿಸಿದರು.ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.ಧನ್ಯವಾದ ಗಣೇಶ್ ಟೈಲರ್ ವಂದಿಸಿದರು.