ಬೈಂದೂರು: ಶ್ರೀ ಬೀರೇಶ್ವರ ದೇವಸ್ಥಾನ ಕಡ್ಕೆ ಯಡ್ತರೆ ಗ್ರಾಮ ಇದರ ರಜತ ಮಹೋತ್ಸವ ಸಂಭ್ರಮ -2024 ಧಾರ್ಮಿಕ ಕಾರ್ಯಕ್ರಮ ಜ.29 ರಿಂದ 31 ರ ವರೆಗೆ ನಡೆಯಲಿದೆ.
ಜ.29 ರಂದು ಸಂಜೆ ದೇವರ ಸನ್ನಿಧಿಯಲ್ಲಿ ವಾಸ್ತು ರಾಕ್ಷೋಘ್ನ ಹೋಮ,ಸುದರ್ಶನ ಹೋಮ,ಬಲಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಜ.30 ರಂದು ಬೆಳಿಗ್ಗೆ ವೈಭಯುತವಾದ ಪುರಮೆರವಣಿಗೆಯೊಂದಿಗೆ ಶ್ರಿದೇವರಿಗೆ ನೂತನ ಬೆಳ್ಳಿ ಕಿರೀಟ ಹಾಗೂ ಮಹಾದ್ವಾರಕ್ಕೆ ಶಿಲಾಮಯ ಪೀಠಸಹಿತ ಗಜಪ್ರತಿಮಾ ಸಮರ್ಪಣೆ ,ವಾರ್ಷಿಕ ವರ್ಧಂತ್ಯೋತ್ಸವದ ಅಂಗವಾಗಿ ಅಷ್ಟೋತ್ತರ ಶಥ ಕಳಸ ಸ್ಥಾಪನೆ,ಕಲಾಹೋಮ,ಕಲಶಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ,ಮದ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ 7 ಗಂಟೆಗೆ ಆಹ್ವಾನಿತ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.
ಜ.31 ರಂದು ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ,ಮಹಾಮಂಗಳಾರತಿ,ಪ್ರಸಾದ ವಿತರಣೆ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ,ಸಂಜೆ 4 ಗಂಟೆಗೆ ರಾಮಕೃಷ್ಣ ಕುಟೀರ ಯಳಜಿತ್ ವಿದ್ಯಾರ್ಥಿಗಳಿಂದ ಭಕ್ತಿ-ಭಾವ-ಸಂಗಮ,ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ಸುಗ್ಗಿ ಕುಣಿತ,ಪ್ರಸಿದ್ದ ಕಲಾ ತಂಡಗಳಿಂದ ಸಾಂಸ್ಕ್ರತಿಕ ವೈಭವ ಹಾಗೂ ಸಿಗಂದೂರು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.