ಬೈಂದೂರು; ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ವಿವಿದ ಕಡೆ ಎ.ಟಿ.ಎಂ ಬಳಕೆದಾರರಿಗೆ ಸಹಾಯ ಮಾಡುವ ನೆಪದಲ್ಲಿ ಹಣ ಲಪಟಾಯಿಸಿದ ವಂಚಕರಿಗೆ ನ್ಯಾಯಾಂಗ ಬಂಧನ ನೀಡಲಾಗಿದೆ.ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ವಿಷೇಶ ತಂಡವನ್ನು ರಚಿಸಿ, ದಿನಾಂಕ 10/01/2024 ರಂದು ಕುಂದಾಪುರದಲ್ಲಿ ಆರೋಪಿತರಾದ 1. ಸಂದೀಪ (36 ವರ್ಷ) ಬರ್ಸಿ ಜಟಾನ್, ಹರಿಯಾಣ ರಾಜ್ಯ. 2. ರವಿ (27 ವರ್ಷ ) ಔರಂಗನಗರ, ಹರಿಯಾಣ ರಾಜ್ಯ ರವರನ್ನು ವಶಕ್ಕೆ ಪಡೆದು ಆರೋಪಿತರಿಂದ ರೂ 21,000/-ಹಣ, 217 ಎ.ಟಿಎಂ ಕಾರ್ಡ ಗಳು POS mechine-1, 2- ಮೊಬೈಲ್ ಗಳನ್ನು ಹಾಗೂ 1 Honda Unicorn ಮೋಟಾರು ಸೈಕಲ್ ನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ.ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲಿ 20 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ತನಿಖೆಯ ವೇಳೆ ತಿಳಿದು ಬಂದಿರುತ್ತದೆ.

ಶ್ರೀ ಎಸ್.ಟಿ. ಸಿದ್ದಲಿಂಗಪ್ಪ, ಶ್ರೀ ಪರಮೇಶ್ವರ ಹೆಗಡೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆರವರುಗಳ ಮಾರ್ಗದರ್ಶನದಂತೆ, ಶ್ರೀ ಬೆಳ್ಳಿಯಪ್ಪ ಕೆ.ಯು ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ, ಶ್ರೀ ಸವಿತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ವೃತ್ತ ಇವರ ಸೂಚನೆಯಂತೆ, ಬೈಂದೂರು ಪೊಲೀಸ್ ಠಾಣೆಯ ಶ್ರೀ ತಿಮ್ಮೇಶ್, ಬಿ.ಎನ್ ಪಿ.ಎಸ್.ಐ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ವಿಭಾಗದ ಸಿಬ್ಬಂದಿಯವರಾದ, ಸುಜಿತ್ ಕುಮಾರ್ , ಮಾಳಪ್ಪ, ಸೂರ ನಾಯ್, ಶ್ರೀಮತಿ ನಾಗಶ್ರೀ, ಶ್ರೀಧರ್ ಪಾಟೀಲ್, ರವರು ಹಾಗೂ ಕುಂದಾಪುರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ಸಹಕರಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಡಾ. ಅರುಣ್ ಕೆ, ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರವರು ಪ್ರಶಂಶಿಸಿರುತ್ತಾರೆ.

Leave a Reply

Your email address will not be published. Required fields are marked *

three × 2 =