ಬೈಂದೂರು: ದಿನದಿಂದ ದಿನಕ್ಕೆ ದುಷ್ಕರ್ಮಿಗಳು ಹೊಸ ಹೊಸ ರೀತಿಯಲ್ಲಿ ದುಷ್ಕೃತ್ಯ ಎಸಗುತ್ತಿದ್ದು ಇದೀಗ ಬೈಂದೂರಿನಲ್ಲಿ ಎ.ಟಿ.ಎಮ್ ನಿಂದ ಹಣ ತೆಗೆಯುವ ಸಮಸ್ಯೆ ಎದುರಿಸಿದ ಗ್ರಾಹಕರನ್ನು ಗುರಿಯಾಗಿಸಿ ಸಹಾಯ ಮಾಡುವ ಸೋಗಿನಲ್ಲಿ ಎ.ಟಿ.ಎಂ ಬದಲಿಸಿ ಗ್ರಾಹಕರು ಹೋದ ನಂತರ ಅವರ ಎಟಿಎಮ್ ನಿಂದ ಹಣ ಎಗರಿಸಿದ ಮೂರು ಪ್ರಕರಣಗಳು ದಾಖಲಾಗಿದೆ.
ಪ್ರಕರಣದ ವಿವರ: ಮೂರು ಪ್ರಕರಣಗಳು ಬೈಂದೂರಿನಲ್ಲಿ ವರದಿಯಾಗಿರುವುದರಿಂದ ಬೈಂದೂರಿನ ಹಲವು ಎಟಿಎಮ್ ಗಳಲ್ಲಿ ಈ ಕೃತ್ಯ ಎಸಗಲು ದುಷ್ಕರ್ಮಿಗಳು ಉಪಾಯ ಹೂಡಿರುವುದು ಸ್ಪಷ್ಟವಾಗಿದೆ.ಬಲ್ಕೀಸ್ ಭಾನು (38), ಚೈತ್ರ (29), ಚಂದ್ರಶೇಖರ (62) ಎಂಬ ಗ್ರಾಹಕರನ್ನು ಯಾಮರಿಸಿ ಎಟಿಎಮ್ ನಿಂದ ದುಷ್ಕರ್ಮಿಗಳು ಹಣ ಲಪಾಟಯಿಸಿದ್ದು ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬಲ್ಕೀಸ್ ಭಾನು ಅವರು ಶಿರೂರು ಕರ್ನಾಟಕ ಬ್ಯಾಂಕಿನಲ್ಲಿ ಹೊಂದಿರುವ ಅವರ ಖಾತೆಯಿಂದ ಕರ್ನಾಟಕ ಬ್ಯಾಂಕಿನ ಎಟಿಎಮ್ ಕಾರ್ಡಿನಿಂದ ಹಣ ತೆಗೆಯಲು ಶಿರೂರು ಅರ್ಬನ್ ಬ್ಯಾಂಕಿನ ಎ ಟಿ ಎಮ್‌ಗೆ ಹೋಗಿದ್ದ ಸಮಯ ಇಬ್ಬರು ಆರೋಪಿಗಳು ಎ.ಟಿ.ಎಮ್ ಒಳಗೆ ಇದ್ದು, ಒಳಗೆ ಬನ್ನಿ ಹಣ ತೆಗೆಯಿರಿ ಎಂದು ಹೇಳಿದಾಗ ಆರೋಪಿಗಳಲ್ಲಿ ಹೊರಗಡೆ ಬರುವಂತೆ ತಿಳಿಸಿದಾಗ ಆರೋಪಿಗಳು ಹೊರಗೆ ಬಂದಿದ್ದು ಎಟಿಎಮ್ ನಲ್ಲಿ ಎಟಿಎಮ್ ಕಾರ್ಡ್ ಹಾಕಿದಾಗ ಹಣ ಬಾರದೇ ಇದ್ದುದ್ದರಿಂದ ಪುನಃ ಕಾರ್ಡನ್ನು ಹಾಕುವ ಸಮಯ ಒಬ್ಬ ಆರೋಪಿ ಎಟಿ ಎಮ್ ಒಳಗೆ ಬಂದು ಐಸಾ ನಹಿ ಡಾಲ್ನೆಕಾ ಐಸಾ ಡಾಲ್ನಾ ಎಂದು ಹೇಳಿ ಕೈಯಿಂದ ಎಟಿಎಮ್ ಪಡೆದು ಆತನ ಮೈಗೆ ಒರೆಸಿ. ಹಣ ಬಾರದೇ, ಬ್ಯಾಲೆನ್ಸ ತೋರಿಸದ ಕಾರಣ ಆರೋಪಿತನು ಎಟಿಎಮ್ ಕಾರ್ಡನ್ನು ಬಿಲ್ಕೀಸ್ ಅವರಿಗೆ ಕೊಟ್ಟು ಹೊರಗೆ ಹೋಗಿ ಮೋಟಾರು ಸೈಕಲನಲ್ಲಿ ಇನ್ನೊಬ್ಬ ಆರೋಪಿತನೊಂದಿಗೆ ಬೈಂದೂರು ಕಡೆಗೆ ಹೋಗಿದ್ದು,ನಂತರ ದೂರುದಾರರು ಶಿರೂರು ಕರ್ನಾಟಕ ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋದಾಗ ಅವರ ಕಾರ್ಡ್ ಬದಲು ಬೇರೆ ಕಾರ್ಡ್ ಇರುವುದು ಕಂಡು ಬಂದಿದ್ದು, ನಂತರ ಬ್ಯಾಂಕ್ ಖಾತೆ ಚೆಕ್ ಮಾಡಿದಾಗ ಅವರ ಖಾತೆಯಿಂದ ಬೆಳಿಗ್ಗೆ 10;30 ಗಂಟೆಗೆ 5000/- ರೂಪಾಯಿ ಹಣ ಡ್ರಾ ಮಾಡಿರುವುದು ಕಂಡು ಬಂದಿರುತ್ತದೆ. ಇಬ್ಬರು ಆರೋಪಿಗಳು ಎಟಿಎಮ್ ಒಳಗೆ ಬಂದು ಎಟಿಎಮ್ ನಿಂದ ಹಣ ತೆಗೆದುಕೊಡುವುದಾಗಿ ನಂಬಿಸಿ ಎ.ಟಿ.ಎಮ್ ಕಾರ್ಡ ತೆಗೆದುಕೊಂಡು, ಎಟಿಎಮ್ ಕಾರ್ಡನ್ನು ಬದಲಾಯಿಸಿ ಬೇರೆ ಎಟಿಎಮ್ ಕಾರ್ಡನ್ನು ಕೊಟ್ಟು, ಬೈಂದೂರು ಕರ್ನಾಟಕ ಬ್ಯಾಂಕ ಎಟಿಎಮ್ ನಲ್ಲಿ ಎಟಿಎಮ್ ಕಾರ್ಡ್ ಬಳಿಸಿ 5000/- ರೂಪಾಯಿ ಹಣ ಡ್ರಾ ಮಾಡಿ ಕಳವು ಮಾಡಿಕೊಂಡು ಹೋಗಿದ್ದಾರೆ.
ಚೈತ್ರಾ ಎಂಬುವವರು ಕೂಡ ಶಿರೂರು ಮಾರ್ಕೇಟ್ ಬಳಿ ಇರುವ ಕೆನರಾ ಬ್ಯಾಂಕ್ ಎ.ಟಿ.ಎಂ ಗೆ ಹಣ ತರಲು ಬೆಳಿಗ್ಗೆ 11:೦೦ ಗಂಟೆಗೆ ಹೋಗಿದ್ದಾಗ ಎ.ಟಿ.ಎಂ. ನಲ್ಲಿ ಒಳಗಡೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಗಂಡಸರು ಇದೇ ರೀತಿಯಾಗಿ ಉಪಾಯ ಹೂಡಿ ವಂಚಿಸಿ 21 ಸಾವಿರ ಹಣ ಲಪಟಾಯಿಸಿದ್ದಾರೆ.
ಚಂದ್ರ ಶೇಖರ್ ಅವರು ಬೈಂದೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಎ.ಟಿ.ಎಂ ಗೆ ಹಣ ತರಲು ಬೆಳಿಗ್ಗೆ 10:45 ಗಂಟೆಗೆ ಹೋಗಿದ್ದಾಗ ಎ.ಟಿ.ಎಂ. ನಲ್ಲಿ ಒಳಗಡೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಗಂಡಸರು ಇದ್ದು ಸಹಾಯ ಮಾಡು ನೆಪದಲ್ಲಿ ಎ.ಟಿ.ಎವಂ ಬದಲಾಯಿಸಿ ಬರೋಬರಿ 2 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ.
ಈ ಇಬ್ಬರು ಅಪರಿಚಿತರು ಮೂವರನ್ನು ವಂಚಿಸಿ ಹಣ ಲಪಟಾಯಿಸಿರುವ ಕುರಿತು ಮೂರು ಪ್ರತ್ಯೇಕ ಪ್ರಕರಣ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2024 ಕಲಂ: 417, 420, 379 ಜೊತೆಗೆ 34 ಐಪಿಸಿಯಂತೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.