ಶಿರೂರು: ಕಳೆದ ಐದು ವರ್ಷಗಳಿಂದ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ನಾತಕೋತ್ತರ ವ್ಯಾಸಾಂಗಕ್ಕಾಗಿ ಗದಗಕ್ಕೆ ತೆರಳುತ್ತಿರುವ ಡಾ.ಸಹನಾ ರವರ ಬೀಳ್ಕೋಡುಗೆ ಸಮಾರಂಭ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರಿನಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಶಿರೂರು ಆರೋಗ್ಯ ಇಲಾಖೆಯ ಸಿಬಂದಿಗಳಿಂದ,ಆಶಾ ಕಾರ್ಯಕರ್ತೆಯರಿಂದ ವೈದ್ಯಾಧಿಕಾರಿಗಳನ್ನು ಸಮ್ಮಾನಿಸಲಾಯಿತು ಬಳಿಕ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿವಿಧ ಇಲಾಖೆಗೆ ಹೋಲಿಸಿದರೆ ಆರೋಗ್ಯ ಇಲಾಖೆ ಅತ್ಯಂತ ಜವಬ್ದಾರಿಯುತ ಇಲಾಖೆಯಾಗಿದೆ.ಅತ್ಯಂತ ದೊಡ್ಡ ವ್ಯಾಪ್ತಿ ಹೊಂದಿರುವ ಶಿರೂರಿನಲ್ಲಿ ಸಾರ್ವಜನಿಕರ ಉತ್ತಮ ಸಹಕಾರ ದೊರೆತಿರುವುದು ನಮ್ಮ ಕರ್ತವ್ಯದ ಉತ್ಕ್ರಷ್ಟತೆಗೆ ಸಹಕಾರಿಯಾಗಿದೆ.ದಾನಿಗಳು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಕಾಳಜಿಯಿಂದ ಶಿರೂರು ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದಷ್ಟು ಸೌಲಭ್ಯಗಳನ್ನು ಹೆಚ್ಚಿಸಲು ಸಾಧ್ಯವಾಗಿದೆ.ಈ ಊರಿನ ಜನತೆಯ ಪ್ರೋತ್ಸಾಹ ನಮ್ಮ ಜವಬ್ದಾರಿಯನ್ನು ಹೆಚ್ಚಿಸಿದೆ.ಇಲ್ಲಿನ ಜನರ ಪ್ರೀತಿ,ವಿಶ್ವಾಸ ನನಗೆ ಶ್ರೀರಕ್ಷೆಯಾಗಿರುವ ಜೊತೆಗೆ ಅತ್ಯುತ್ತಮ ಸೇವೆ ನೀಡಿದ ಸಂತೃಪ್ತಿಯಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಶಿರೂರಿನ ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್,ಪಡುವರಿ ಗ್ರಾ.ಪಂ ಮಾಜಿ ಅಧ್ಯಕ್ಷೆ ದೀಪಾ ಶೆಟ್ಟಿ,ಉಪಾಧ್ಯಕ್ಷ ಸದಾಶಿವ ಡಿ.ಪಡುವರಿ,ದೇವರಾಜ ಪಡಿಯಾರ್ ಉಪಸ್ಥಿತರಿದ್ದರು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ರಾಜೇಶ್ವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆರೋಗ್ಯ ಇಲಾಖೆಯ ಸಿಬಂಧಿ ಜೋಯಿಲಿನ್ ಡಿ.ಸೋಜಾ ಸ್ವಾಗತಿಸಿದರು.ಸಿಬಂಧಿ ನಾಗರಾಜ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಪವನ್ ಕುಮಾರ್ ಶಿರೂರು