ಬೈಂದೂರು; ಹಣಕಾಸು ವ್ಯವಹಾರಕ್ಕೆ ಕುರಿತಂತೆ ಖ್ಯಾತ ಕ್ರಿಕೆಟಿಗ ಶ್ರೀಶಾಂತ್,ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ ಸೇರಿದಂತೆ ಮೂವರ ವಿರುದ್ದ 18.75 ಲಕ್ಷ ಹಣ ವಂಚನೆಯಾಗಿದೆ ಎಂದು ಕಣ್ಣೂರು ಮೂಲದ ಸುರೇಶ್ ಗೋಪಾಲನ್ ದೂರು ದಾಖಲಿಸಿದ ವರದಿ ಮಾದ್ಯಮಗಳಲ್ಲಿ ಬಂದಿದ್ದು ಇದು ಸತ್ಯಕ್ಕೆ ದೂರವಾಗಿದ್ದು ಈ ಪ್ರಕರಣದಲ್ಲಿ ಶ್ರೀಶಾಂತ್ ಹಾಗೂ ವೆಂಕಟೇಶ ಕಿಣಿ ಪಾತ್ರವಿಲ್ಲ.ಅನಗತ್ಯವಾಗಿ ಅವರುಗಳ ಹೆಸರುಗಳನ್ನು ಸೇರಿಸಲಾಗಿದೆ.ಎಂದು ಓಂ ಭಾರತ್ ಸಂಸ್ಥೆ ಪಾಲುದಾರ ರಾಜೀವ ಕುಮಾರ ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ಹಿನ್ನಲೆ:ಕೇರಳ ಮೂಲದ ರಾಜೀವ ಕುಮಾರ ಹಾಗೂ ಸಾಜು ಓಂ ಭಾರತ್ ಸಂಸ್ಥೆ ಮೂಲಕ ಬೈಂದೂರಿನ ವೆಂಕಟೇಶ ಕಿಣಿ ಜೊತೆ ವಸತಿ,ವಾಣಿಜ್ಯ ಸಂಕೀರ್ಣ,ಸೇರಿದಂತೆ ವ್ಯವಹಾರದಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಿದ್ದರು.2019 ರಲ್ಲಿ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡಮೆ ಸ್ಥಾಪಿಸುವ ಕುರಿತು ಖ್ಯಾತ ಕ್ರಿಕೆಟಿಗ ಶ್ರೀಶಾಂತ್ ಯೋಜನೆ ರೂಪಿಸಿದ್ದರು.ಕಿಣಿಯವರು ಸಹಕರಿಸಿದ್ದರು.ಕೋವಿಡ್ ಹಾಗೂ ತಾಂತ್ರಿಕ ಸಮಸ್ಯೆ ಕಾರಣ ಇದನ್ನು ಕೈ ಬಿಡಲಾಗಿತ್ತು. ಕಿಣಿ ಹಾಗೂ ಓಂ ಭಾರತ್ ಸಂಸ್ಥೆ ನಡುವೆ ಅಕಾಡಮೆ ಕುರಿತಂತೆ ಯಾವುದೆ ಹಣಕಾಸು ವ್ಯವಹಾರಗಳಿರಲಿಲ್ಲ.ಓಂ ಭಾರತ ಸಂಸ್ಥೆಯ ರಾಜೀವ್ ರವರ ವ್ಯವಹಾರದಲ್ಲಿ ವೆಂಕಟೇಶ್ ಕಿಣಿ ಹೆಸರು ಸೇರಿಸಿ ಹಣದ ವಂಚನೆ ಆಗಿದೆ ಎಂದು ಅಪಪ್ರಚಾರ ನಡೆಸಲಾಗಿದೆ.ಈ ಕುರಿತು ಪ್ರತಿಕ್ರಯಿಸಿದ ರಾಜೀವ ಕುಮಾರ ಇದರಲ್ಲಿ ಶ್ರೀಶಾಂತ್ ಹಾಗೂ ಕಿಣಿಯವರ ಪಾತ್ರ ಎಳ್ಳಷ್ಟು ಇಲ್ಲವಾಗಿದೆ..ಮತ್ತು ಈ ಕುರಿತು ಕಾನೂನು ಕ್ರಮ ಕೂಡ ಕೈಗೊಳ್ಖಲಾಗುವುದು.ನನ್ನಿಂದಾಗಿ ಕ್ರಿಕೆಟಿಗ ಶ್ರೀಶಾಂತ ಹಾಗೂ ಉದ್ಯಮಿ ವೆಂಕಟೇಶ ಕಿಣಿ ವ್ಯಕ್ತಿತ್ವಕ್ಕೆ ಧಕ್ಜೆಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸುತಿದ್ದೇನೆ.ದೂರು ನೀಡಿದ ಸುರೇಶ ಗೋಪಾಲನ್ ರವರಿಗೆ ಬರಬೇಕಾದ ಹಣಕಾಸು ವ್ಯವಹಾರ ಕೂಡ ಸಂದಾಯವಾಗಿದೆ.ಈ ಕುರಿತು ಅವರು ಮಾದ್ಯಮ ಹೇಳಿಕೆ ಕೂಡ ನೀಡಲಿದ್ದಾರೆ ಎಂದಿದ್ದಾರೆ.
ವೆಂಕಟೇಶ ಕಿಣಿಯವರ ಬೆಳವಣಿಗೆ ಸಹಿಸದ ಕೆಲವು ವ್ಯಕ್ತಿಗಳು ಅನಗತ್ಯ ಅಪಪ್ರಚಾರ ಮಾಡಿದ್ದು ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.ಈ ಪ್ರಕರಣದಲ್ಲಿ ಯಾವುದೆ ರೀತಿಯ ವಂಚನೆಯಾಗಿಲ್ಲ.ಕಾನೂನು ರೀತಿಯಲ್ಲಿ ಇತ್ಯರ್ಥಗೊಂಡಿದೆ ಎಂದು ರಾಜೀವ್ ಮಾದ್ಯಮಕ್ಕೆ ತಿಳಿಸಿದ್ದಾರೆ.