ಶಿರೂರು: ಕಟ್ಟೆ ಗೆಳೆಯರ ಬಳಗ,ನಂದಿಕೇಶ್ವರ ಕ್ರಿಕೆಟ್ ಕ್ಲಬ್, ಕೋಸ್ಟಲ್ ಪ್ರೆಂಡ್ಸ್ ಇವರ ಜಂಟಿ ಆಶ್ರಯದಲ್ಲಿ ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಸಾರಥ್ಯದಲ್ಲಿ 15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ವೃಕ್ಷ -2023 ಕಟ್ಟೆಗದ್ದೆ ಬಯಲು ರಂಗ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೋಹನ ಪೂಜಾರಿ ಶಿರೂರು ಹಾಗೂ ಪೆರ್ಡೂರು ಮೇಳದ ಯಕ್ಷಗಾನ ಕಲಾವಿದ ಕಾರ್ತಿಕ ಚಿಟ್ಟಾಣಿ ಯವರನ್ನು ಸಮ್ಮಾನಿಸಲಾಯಿತು.

ಸಮ್ಮಾನಿತರ ಪರವಾಗಿ ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ ಮಾತನಾಡಿ ಯಕ್ಷಗಾನ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ನಡೆಯುವಂತಾಗಲಿ.ಯಕ್ಷಗಾನ ಕರಾವಳಿಯ ಸಾಂಸ್ಕ್ರತಿಕ ಪರಂಪರೆಯನ್ನು ಜಗದಗಲ ಪಸರಿಸಿದೆ.ಪ್ರತಿವರ್ಷ ನಿರಂತರ ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ದೀಪಕ್ ಕುಮಾರ್ ಶೆಟ್ಟಿಯವರ ಪ್ರಯತ್ನ ಶ್ಲಾಘನೀಯವಾಗಿದೆ.ಯಕ್ಷಗಾನ ಕ್ಷೇತ್ರದ ಸೇವೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಪ್ರಯತ್ನ ನಿರಂತರವಾಗಿರಲಿ ಎಂದರು.

ವೇದಿಕೆಯಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಉದ್ಯಮಿ ರಘುರಾಮ ಕೆ.ಪೂಜಾರಿ,ಶಿರೂರು ಗ್ರಾ.ಪಂ ಸದಸ್ಯ ಪ್ರಸನ್ನ ಶೆಟ್ಟಿ ಕರಾವಳಿ,ಬೈಂದೂರು ಯುವ ಬಂಟರ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಕುದ್ರುಕಡು,ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗೇರ್,ಎರಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಾಂತಾನಂದ ಆಚಾರ್ಯ,ರವೀಂದ್ರ ಶೆಟ್ಟಿ ಹೊನ್ಕೇರಿ,ಕಿಶೋರ್ ಪೂಜಾರಿ,ದಿನಕರ ಗಾಣಿಗ,ಉಪಸ್ಥಿತರಿದ್ದರು.

ಯಕ್ಷ ವೃಕ್ಷ ಕರಾವಳಿ ಸಂಯೋಜಕ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಬಳಿಕ ಆನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪವಿತ್ರ ಪದ್ಮಿನಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

News/Giri shiruru

Leave a Reply

Your email address will not be published.

thirteen − 1 =