ಶಿರೂರು: ಸ್ವಚ್ಚತೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಸ್ವಚ್ಚತೆ ಕಾರ್ಯಕ್ರಮಗಳಾದಾಗ ಊರಿನ ಆರೋಗ್ಯ ಮತ್ತು ಉತ್ತಮ ಪರಿಸರವನ್ನು ಕಾಪಾಡಿಕೊಳ್ಳು ಸಾಧ್ಯ.ಪರಿಸರವನ್ನು ವಿಶೇಷ ಕಾಳಜಿಯಿಂದ ನೋಡುವುದರಿಂದ ನಿಸರ್ಗ ಉಳಿಯುತ್ತದೆ ಹಾಗೂ ಸಮೃದ್ದ ಬೈಂದೂರು ಪರಿಕಲ್ಪನೆಯಲ್ಲಿ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಕೇಸರಿ ಪಡೆ,ಶೌರ್ಯ ವಿಪತ್ತು ತಂಡ ಹಡವಿನಕೋಣೆ ಶಿರೂರು,ಪಾಂಚಜನ್ಯ ಕ್ರೀಡಾ ಸಂಘ ಬೈಂದೂರು ಹಾಗೂ ಶ್ರೀನಿಧಿ ಭಜನಾ ಮಂಡಳಿ ಬೈಂದೂರು ಇದರ ವತಿಯಿಂದ ಶಿರೂರು ಕಳಿಹಿತ್ಲು ಬೀಚ್‌ನಲ್ಲಿ 23ನೇ ಕ್ಲೀನ್ ಕಿನಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ ಶೆಟ್ಟಿ,ತುಳಸಿದಾಸ್ ಮೊಗೇರ್,ಮಂಜುನಾಥ ಪೈ,ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಗ್ರಾ.ಪಂ ಸದಸ್ಯ ಸುರೇಂದ್ರ ದೇವಾಡಿಗ,ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು,ಗಿರೀಶ ಮೇಸ್ತ,ಶೌರ್ಯ ವಿಪತ್ತು ತಂಡದ ಅಣ್ಣಪ್ಪ ಮೇಸ್ತ,ಯೋಗೇಶ್ ಪೂಜಾರಿ,ಶಾಂತಾನಂದ ಆಚಾರ್ಯ,ರತ್ನಾಕರ ಮೇಸ್ತ ಮೊದಲಾದವರು ಹಾಜರಿದ್ದರು.
News/Giri shiruru