ಶಿರೂರು: ಅನಧೀಕೃತವಾಗಿ ಮಣ್ಣು ಸಾಗಾಟ ಮಾಡಿದ ಪರಿಣಾಮ ಹತ್ತು ಅಡಿಗೂ ಅಧಿಕ ಗುಡ್ಡದ ಮಣ್ಣು ಕೊರೆದ ಕಾರಣ ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯ ದಲಿತರ ಮನೆಗಳು ಬಿರುಕು ಬಿಟ್ಟು ಕುಸಿಯುವ ಬೀತಿಯಲ್ಲಿದೆ.ಇಲ್ಲಿನ ಸುತ್ತಮುತ್ತ ಹತ್ತಕ್ಕೂ ಅಧಿಕ ದಲಿತ ಕುಟುಂಬಗಳು ಐವತ್ತಕ್ಕೂ ಅಧಿಕ ವರ್ಷಗಳಿಂದ ವಾಸವಾಗಿದ್ದಾರೆ.ಮಾತ್ರವಲ್ಲದೆ ಪಂಚಾಯತ್ ಮನೆ ಸೇರಿದಂತೆ ಸರಕಾರದ ಸವಲತ್ತು ಕೂಡ ಪಡೆದಿದ್ದಾರೆ.ಆದರೆ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ಸ್ಥಳೀಯರಿಗೆ ಯಾವುದೇ ಮಾಹಿತಿಯಿಲ್ಲದೆ ಜಾಗದ ಮಣ್ಣು ತೆಗೆದಿರುವುದರಿಂದ ಮನೆಗಳು ಅಪಾಯದಲ್ಲಿದೆ.ಗೋಡೆಗಳು ಬಿರುಕು ಬಿಟ್ಟಿರುವ ಜೊತೆಗೆ ಅಪಾಯದಲ್ಲಿದೆ.
ಸ್ಥಳಕ್ಕೆ ವಿವಿಧ ಅಧಿಕಾರಿಗಳು ಭೇಟಿ: ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿ ಮಣ್ಣು ಸಾಗಾಟದಿಂದ ಬಿರುಕುಬಿಟ್ಟ ಸ್ಥಳಕ್ಕೆ ಮಂಗಳವಾರ ವಿವಿಧ ಅಧಿಕಾರಿಗಳು ಭೇಟಿ ನೀಡಿದ್ದು ಈ ಮನೆಯಲ್ಲಿರುವವರು ಕುಟುಂಬ ಸಮೇತ ಅಂಬೇಡ್ಕರ್ ಸಭಾಭವನದಲ್ಲಿ ವಾಸಿಸುತಿದ್ದಾರೆ.ಮನೆ ಕುಸಿಯುವ ಬೀತಿ ಇದೆ. ಅದರಲ್ಲೂ ಸರ್ವೆ ಮಾಡಲು ಅಧಿಕಾರಿಗಳು ಆಗಮಿಸಿದ್ದು ಸ್ಥಳಿಯರು ಮೊದಲು ದಲಿತರ ಮನೆಗಳ ಸಮಸ್ಯೆ ಪರಿಹರಿಸಿ ಬಳಿಕ ಸರ್ವೆ ಮಾಡಲು ತಿಳಿಸಿದ್ದಾರೆ.ಜಾಗ ವ್ಯಾಪಾರ ಮಾಡಿಕೊಂಡ ವ್ಯಕ್ತಿ ನಕಲಿ ದಾಖಲೆ ಸೃಷ್ಟಿ ಮಾಡಿದ ಅನುಮಾನವಿದೆ.ಹೀಗಾಗಿ ದಾಖಲೆ ಸಮರ್ಪಕವಾಗಿ ಪರಿಶೀಲನೆಯಾಗಲಿ ಅನ್ನೋದು ಇಲ್ಲಿಯವರ ಆಗ್ರಹವಾಗಿದೆ.ಸ್ಥಳಕ್ಕೆ ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮೀ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ರಾಘವೇಂದ್ರ ವರ್ಣಿಕರ್,ರಮೇಶ ಕುಲಾಲ್,ಭೂವಿಜ್ಞಾನಿ ಸಂದ್ಯಾ,ಗಣಿ ಇಲಾಖೆಯ ಚಲುವಮೂರ್ತಿ,ಶಿರೂರು ಗ್ರಾ.ಪಂ ಅಧ್ಯಕ್ಷ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ,ಶಿರೂರು ಗ್ರಾಮಲೆಕ್ಕಾಧಿಕಾರಿ ವಿಜಯ್ ಕುಮಾರ್, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ,ಪ್ರಸನ್ನ ಶೆಟ್ಟಿ ಕರಾವಳಿ ಮೊದಲಾದವರು ಹಾಜರಿದ್ದರು.