ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮಹತೋಭಾರ ಶ್ರೀ  ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಂಭ್ರಮದಲ್ಲಿದೆ.ಸುವರ್ಣ ಮಹೋತ್ಸವದ ಪ್ರಯುಕ್ತ ಅದ್ದೂರಿಯ ಶಾರದೋತ್ಸವ ಆಯೋಜಿಸಲಾಗಿದೆ ಮತ್ತು ಮುಂದಿನ ದಿನದಲ್ಲಿ ಬೈಂದೂರು ದಸರಾ ಹಬ್ಬವಾಗಿ ಮೂಡಿಬರಲಿದೆ.ಈ ವರ್ಷದಿಂದ ಅದ್ದೂರಿಯ ಬೈಂದೂರು ದಸರಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸುವರ್ಣ ಮಹೋತ್ಸವ ಶಾರದೋತ್ಸವ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅತ್ಯಂತ ಅದ್ದೂರಿಯಾಗಿ ಈ ವರ್ಷ ಬೈಂದೂರು ದಸರಾ ಕಾರ್ಯಕ್ರಮ ನಡೆಯಲಿದೆ.ವಿವಿಧ ಸ್ಪರ್ಧೆಗಳು,ಧಾರ್ಮಿಕ ಕಾರ್ಯಕ್ರಮ,ಆಯ್ದ ಪ್ರಸಿದ್ದ ತಂಡಗಳಿಂದ ಕಲಾ ವೈಭವ ಹಾಗೂ ಅದ್ದೂರಿಯ ನಗರೋತ್ಸವ ನಡೆಯಲಿದೆ.ದಸರಾ ಮೆರವಣಿಗೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ದ ಕಲಾ ತಂಡಗಳು ಭಾಗವಹಿಸಲಿದೆ ಎಂದರು.ಭಕ್ತಾಭಿಮಾನಿಗಳು ಈ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಶಾರದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬಂದೂರು ದಸರಾ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಣ್ಣಪ್ಪ ಪೂಜಾರಿ ಯಡ್ತರೆ,ಗೋಪಾಲ ಗಾಣಿಗ ಬಂಕೇಶ್ವರ,ಮಹೇಶ್ ಆಚಾರ್,ಗುರುಪ್ರಸಾದ್,ನಿತಿನ್ ಬೈಂದೂರು,ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್,ರಾಘವೇಂದ್ರ ಪೂಜಾರಿ,ಉಮೇಶ ದೇವಾಡಿಗ ಮೊದಲಾದವರು ಹಾಜರಿದ್ದರು.

 

 

 

 

 

Leave a Reply

Your email address will not be published.

3 × four =