ಶಿರೂರು ; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಜೇಸಿ ಹಬ್ಬ -2023 ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಜೇಸಿ ವಲಯ 15ರ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್ ಜೇಸಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜೆಸಿಐ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಿಂದ ಮನ್ನಣೆ ಪಡೆದುಕೊಂಡಿದೆ.ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದೆ.ಗ್ರಾಮೀಣ ಭಾಗವಾದ ಶಿರೂರು ಜೆಸಿಐ ತನ್ನ ವಿಭಿನ್ನ ಮತ್ತು ವಿಶಿಷ್ಟ ಕಾರ್ಯಕ್ರಮ ಸಂಯೋಜನೆಯಿಂದ ಜೆಸಿ ವಲಯದಲ್ಲಿ ಗುರುತಿಸಿಕೊಂಡಿದೆ.ಜೆ.ಸಿ.ಐ ಶಿರೂರು ಇದರ ಕಾರ್ಯಗಳು ಶ್ಲಾಘನೀಯ ಎಂದರು.
ಶಿರೂರು ಜೆಸಿಐ ಅಧ್ಯಕ್ಷ ನಾಗೇಂದ್ರ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮ ಎ.ಮೇಸ್ತ,ರೋಟರಿ ಕ್ಲಬ್ ರಿಪ್ಪನಪೇಟೆ ಅಧ್ಯಕ್ಷ ದೇವಿದಾಸ್ ಆಚಾರ್,ವಕೀಲ ಗಣೇಶ ಮೇಸ್ತ,ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ನರೇಂದ್ರ ಶೇಟ್,ಜೆಸಿಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಸದಾನಂದ ಪ್ರಭು ಯಳಜಿತ್ ರವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ನಿಕಟಪೂರ್ವಾಧ್ಯಕ್ಷ ಸುರೇಶ್ ಮಾಕೋಡಿ ಯವರಿಗೆ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯದರ್ಶಿ ವಿನೋದ ಮೇಸ್ತ ವಂದಿಸಿದರು ಸಭಾ ಕಾರ್ಯಕ್ರಮದ ಬಳಿಕ ಬಳಿಕ ಪುಟಾಣಿಗಳಿಗೆ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.