ಬೈಂದೂರು; ರಾಜ್ಯದ ಇತರ ಜಿಲ್ಲೆಗಳಿಗೆ ಒಂದು ನಿಯಮವಾದರೆ ಉಡುಪಿ ಜಿಲ್ಲೆಗೊಂದು ಪ್ರತ್ಯೇಕ ನಿಯಮ ಜಾರಿ ಮಾಡಿದಂತಿದೆ.ಕಳೆದ ಒಂದು ತಿಂಗಳಿಂದ ಉಡಪಿ ಜಿಲ್ಲೆಯಲ್ಲಿ ಜನಜೀವನ ಪರಿಸ್ಥಿತಿ ಹದಗೆಟ್ಟಿದೆ.ಲಾರಿ ಚಾಲಕ ಮಾಲಕರ ಬದುಕು ಬೀದಿಗೆ ಬಂದಿದೆ.ಕರಾವಳಿ ಜಿಲ್ಲೆಯಲ್ಲಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಮರಳುಗಾರಿಕೆ,ಮಣ್ಣು ಸಾಗಾಟ ನಡೆಯುತ್ತಿದೆ.ಜಿಲ್ಲೆಯಲ್ಲಿ ಶೇ.20% ಕಲ್ಲು, ಮರಳು ಬಳಸಿದರೆ ಕರಾವಳಿ ಜಿಲ್ಲೆಯಲ್ಲಿ ಶೇ.ನೂರರಲ್ಲಿ ಕಲ್ಲು,ಮರಳು ಬಳಸಿ ಕಟ್ಟಡ ನಿರ್ಮಿಸುತ್ತಿದ್ದಾರೆ.ಇಲ್ಲಿನ ಕಲ್ಲುಗಳಲ್ಲಿ ಬಾಕ್ಸೆಟ್‌ಗಳಿಲ್ಲ ಜಿಲ್ಲಾಡಳಿತ ಹಾಗೂ ಆರಕ್ಷಕ ಅಧಿಕಾರಿಗಳು ಇಲ್ಲಿನ ವಾಸ್ತವತೆಯನ್ನು ಅರಿಯಬೇಕು ಮಳೆಗಾಲದಲ್ಲಿ ಉದ್ಯೋಗ ಎಲ್ಲಿದೆ ಸಂಕಷ್ಟದಲ್ಲಿದ್ದ ಲಾರಿ,ಕೋರೆ ಮಾಲಕರು,ಕೂಲಿಗಳಿಗೆ ಇದ್ದಕ್ಕಿದಂತೆ ಕಠಿಣ ನಿಯಮ ಜಾರಿ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.ಹೀಗಾಗಿ ಸರಕಾರ ಮತ್ತು ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂಧಿಸಬೇಕು.ಈ ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ಜನಸಾಮಾನ್ಯರ ಬದುಕು ಬೀದಿಗೆ ಬರುತ್ತದೆ.ಜಿಲ್ಲೆಯಾಧ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬೈಂದೂರು ಲಾರಿ ಮತ್ತು ಕೋರೆ ಮಾಲಕರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ನೆಲ್ಯಾಡಿ ಹೇಳಿದರು.ಅವರು ಬೈಂದೂರಿನಲ್ಲಿ ಐದನೇ ದಿನಕ್ಕೆ ಮುಂದುವರಿದ ಲಾರಿ ಚಾಲಕರ ಮಾಲಕರ ಪ್ರತಿಭಟನೆ ಉದ್ದೇಶಿಸಿ ಈ ಮಾತುಗಳನ್ನಾಡಿದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಆರಕ್ಷಕ ಮತ್ತು ಜಿಲ್ಲಾಡಳಿತದ ನಿಯಮಗಳಿಂದ ಕೂಲಿ,ಹೋಟೆಲ್ ಸೇರಿದಂತೆ ಕಟ್ಟಡ ಸಾಮಾಗ್ರಿ ಅಂಗಡಿಗಳು ಎಲ್ಲರಿಗೂ ಕಷ್ಟ ಎದುರಾಗಿದೆ ಕಾನೂನು ಪ್ರಕಾರ ಇರಬೇಕಾಗಿರುವುದು ನಮ್ಮ ಅಪೇಕ್ಷೆ.ಅದರ ಅನುಷ್ಟಾನವಾಗಬೇಕಾದರೆ ವಾಸ್ತವಿಕತೆ ಅರಿತು ಜಾರಿ ಮಾಡಬೇಕು ಮತ್ತು ಸಮಯಾವಕಾಶ ನೀಡಬೇಕು ಜಿಲ್ಲಾಡಳಿತದ ಕ್ರಮದಿಂದ ಜಿಲ್ಲೆಯ ಉದ್ಯಮಕ್ಕೆ ಹೊಡೆತ ಬಿದ್ದಿದೆ.ಗ್ರಾಮೀಣ ಭಾಗದಲ್ಲಿ ಸಾಲ ತೀರಿಸಲಾಗದ ಸಂಕಷ್ಟವಿದೆ.ತಕ್ಷಣ ಸರಕಾರ ಇದಕ್ಕೆ ಸ್ಪಂಧಿಸಬೇಕು ಎಂದರು.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಐದು ದಿನದಿಂದ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿದೆ.ಮಾತ್ರವಲ್ಲದೆ ಕಟ್ಟಡ ಸಾಮಾಗ್ರಿ ಸರಬರಾಜಾಗದೆ ಜನಜೀವನ ಪರಿಸ್ಥಿತಿ ಹದಗೆಟ್ಟಿದೆ ಜಿಲ್ಲಾಡಳಿತ ಈ ಬಗ್ಗೆ ಸಮರ್ಪಕವಾಗಿ ಸ್ಪಂಧಿಸಬೇಕಾಗಿದೆ.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ವ್ಯಾಪ್ತಿಯ ಲಾರಿ,ಚಾಲಕ,ಮಾಲಕರು,ಕೋರೆ ಮಾಲಕರು ಹಾಗೂ ಇತರರು ಹಾಜರಿದ್ದರು.ಗಣೇಶ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/Giri shiruru