ಬೈಂದೂರು: ಜೆಸಿಐ ಉಪ್ಪುಂದ ಇದರ ವತಿಯಿಂದ 19ನೇ ಜೇಸಿ ಸಪ್ತಾಹದ ಅಂಗವಾಗಿ ದಿಗ್ವಿಜಯ -2023 ಅದ್ದೂರಿ ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ಸೆಪ್ಟೆಂಬರ್ 10 ರಿಂದ 16 ರವರೆಗೆ ಉಪ್ಪುಂದ ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸೆ.10 ರಂದು ಸಂಜೆ 6:30ಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ 19ನೇ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.ಸಂಜೆ ತಾಲೂಕು ಮಟ್ಟದ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ ಬಳಿಕ ಕುಂದಾಪ್ರ ಕನ್ನಡದ ಮನು ಹಂದಾಡಿ ಇವರಿಂದ ಕುಂದಗನ್ನಡದ ಹಾಸ್ಯ ಕಾರ್ಯಕ್ರಮ ಹಾಗೂ ಕುಂದಾಪ್ರ ಕನ್ನಡದ ಹೆಂಗ್ಸ್ರ್ ಪಂಚೇತಿ ಹಾಸ್ಯ ಪ್ರದರ್ಶನಗೊಳ್ಳಲಿದೆ.
ಸೆ.11ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಸ.ಹಿ.ಪ್ರಾ.ಶಾಲೆ ಬಾಡ ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ ಬಳಿಕ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಕಲಾ ವೈಭವ ಹಾಗೂ ವಿಶೇಷ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ.
ಸೆ.12 ರಂದು ಸಂಜೆ ಸಭಾ ಕಾರ್ಯಕ್ರಮ,ಸ.ಹಿ.ಪ್ರಾ.ಶಾಲೆ ಉಪ್ಪುಂದ ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ನಡೆಯಲಿದೆ ಬಳಿಕ ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ಅತಿಥಿ ಕಲಾವಿದರಿಂದ ಕಂಸ ದಿಗ್ವಿಜಯ -ಕಂಸ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸೆ.13 ರಂದು ಸಂಜೆ ಸಭಾ ಕಾರ್ಯಕ್ರಮ,ಸ.ಹಿ.ಪ್ರಾ.ಶಾಲೆ ಮಡಿಕಲ್ ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ನಡೆಯಲಿದೆ ಬಳಿಕ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಕಣ್ಣಾ ಮುಚ್ಚಾಲೆ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.14 ರಂದು ಸಂಜೆ ಸಭಾ ಕಾರ್ಯಕ್ರಮ,ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉಪ್ಪುಂದ ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ನಡೆಯಲಿದೆ.ಡ್ಯಾನ್ಸ್ ಕ್ರೀವ್ ಹೊನ್ನಾವರ ಇವರಿಂದ ಡಾನ್ಸ್ ಧಮಾಕ ನಡೆಯಲಿದೆ.
ಸೆ.15ರಂದು ಸಂಜೆ ಸಭಾ ಕಾರ್ಯಕ್ರಮ,ಸ.ಹಿ.ಪ್ರಾ.ಶಾಲೆ ಉಪ್ಪುಂದ ಅಮ್ಮನವರತೊಪ್ಲು ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ನಡೆಯಲಿದೆ ಬಳಿಕ ಮೂರು ಮುತ್ತು ಕುಂದಾಪುರ ಇವರಿಂದ ಹಾಸ್ಯ ಪ್ರಹಸನ ನಡೆಯಲಿದೆ.
ಸೆ.16 ರಂದು ಸಂಜೆ ಸಮಾರೋಪ ಸಮಾರಂಭ.ಸ.ಹಿ.ಪ್ರಾ.ಶಾಲೆ ಕಂಚಿಕಾನ್ ಉಪ್ಪುಂದ ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ನಡೆಯಲಿದೆ ಬಳಿಕ ಮಂಗಳೂರು ಅರೆಹೊಳೆ ಪ್ರತಿಷ್ಠಾನ ಇವರಿಂದ ಬಿಡುವನೆ ಬ್ರಹ್ಮಲಿಂಗ ವಿವಿಧ ನೃತ್ಯ ವಿನೋದಾವಳಿಗಳು ನಡೆಯಲಿದೆ.
ಪ್ರತಿದಿನ ಗ್ರಾಮೀಣ ಕ್ರೀಡೆಗಳು,ವಿವಿಧ ಸ್ಪರ್ಧೆಗಳು,ನೃತ್ಯ ವೈವಿದ್ಯ,ಸಾಧಕರಿಗೆ ಗೌರವ,ಸೈನಿಕರಿಗೆ ಸಮ್ಮಾನ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮ್ಮಾನ,ಸಾಧನಾಶ್ರೀ ಪ್ರಶಸ್ತಿ ಪ್ರಧಾನ,ಉದ್ಯಮ ರತ್ನ ಪ್ರಶಸ್ತಿ ಹಾಗೂ ಕನ್ನಡ ಚಿತ್ರರಂಗದ ವಿವಿಧ ಸಿನಿ ತಾರೆಯರೆ ಆಗಮನದ ನಿರೀಕ್ಷೆಯಿದೆ ಎಂದು ಉಪ್ಪುಂದ ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.