ಬೈಂದೂರು: ಜೆಸಿಐ ಉಪ್ಪುಂದ ಇದರ ವತಿಯಿಂದ ನೂರನೇ ಕಾರ್ಯಕ್ರಮದ ಅಂಗವಾಗಿ ಅಕ್ಷರ ಸಂತ ಹಾಗೂ ವೃಕ್ಷ ಮಾತೆಗೆ ನಮ್ಮ ನಮನದ ಅಂಗವಾಗಿ ಪದ್ಮಶ್ರೀ ತುಳಸಿ ಗೌಡ ಹಾಗೂ ಹರೇಕಳ ಹಾಜಬ್ಬ ರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 100ನೇ ಕಾರ್ಯಕ್ರಮದ ನೆನಪಿಗಾಗಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಕಾರ್ಯಕ್ರಮ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಜಿ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹರೇಕಳ ಹಾಜಪ್ಪ ಮತ್ತು ತುಳಸಿ ಗೌಡ ಇಂದಿನ ಯುವ ಸಮುದಾಯಕ್ಕೆ ಮಾದರಿ.ಯಾವುದೆ ಪ್ರತಿಫಲದ ಅಪೇಕ್ಷೆ ಇಲ್ಲದ ಅವರ ದೂರದೃಷ್ಟಿತ್ವದ ಸೇವೆ ಇಂದು ಪದ್ಮಶ್ರೀ ಪ್ರಶಸ್ತಿ ಪಡೆಯುವ ಹಂತಕ್ಕೆ ತಲುಪಿರುವುದು ಅರ್ಹರಿಗೆ ಸಂಧ ಸೂಕ್ತ ಗೌರವವಾಗಿದೆ.ವಯಕ್ತಿಕವಾಗಿ ಯೋಚಿಸದೆ ಸಮಾಜಕ್ಕಾಗಿ ಮಿಡಿದ ಅವರ ಕಾಳಜಿ ಪ್ರಕ್ರತಿ ಕಾಳಜಿ ಜೊತೆಗೆ ಪರಿಸರ ಪ್ರೇಮದ ಪಾಠ ಕಲಿಸಿದೆ ಅವರ ಆದರ್ಶ ನಮಗೆಲ್ಲ ಮಾರ್ಗದರ್ಶನ ಎಂದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ವೃಕ್ಷ ಮಾತೆ ತುಳಸಿ ಗೌಡ ಅವರಿಗೆ ಜೇಸಿಐ ಉಪ್ಪುಂದ ವತಿಯಿಂದ ಸಮ್ಮಾನಿಸಲಾಯಿತು ಹಾಗೂ ನೂರನೇ ಕಾರ್ಯಕ್ರಮದ ಸವಿನೆನಪಿಗಾಗಿ ಸ್ಥಳೀಯ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪದ್ಮಶ್ರೀ ಪುರಸ್ಕೃತರ ಕೈಯಿಂದ ಗಿಡಗಳನ್ನು ವಿತರಿಸಲಾಯಿತು.
ಜೇಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಂದೂರು ವಲಯ ಉಪ ಅರಣ್ಯಾಧಿಕಾರಿ ರವಿರಾಜ್, ಕುಂದಾಪುರ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ,ಉದ್ಯಮಿ ದಿವಾಕರ್ ಶೆಟ್ಟಿ, ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಭು ಶಿರೂರು, ಉಪ್ಪುಂದ ಮಾತೃಶ್ರೀ ಸಭಾಭವನದ ಮಾಲಕ ಯು.ಎ ಮಂಜು ದೇವಾಡಿಗ ಅರೆಹಾಡಿ, ಜೇಸಿಐ ಉಪ್ಪುಂದ ನಿಕಟಪೂರ್ವಾಧ್ಯಕ್ಷ ನಾಗರಾಜ್ ಉಬ್ಜೇರಿ,ಕಾರ್ಯಕ್ರಮದ ನಿರ್ದೇಶಕರಾದ ಮಂಗೇಶ್ ಶ್ಯಾನುಭಾಗ್, ಯು ಪ್ರಕಾಶ್ ಭಟ್ ಉಪ್ಪುಂದ, ಕಾರ್ಯಕ್ರಮದ ಸಹ ನಿರ್ದೇಶಕರಾದ ಶಿವಾನಂದ ಕೆರ್ಗಾಲ್, ಅನುದೀಪ್ ನಾಯ್ಕ್, ಜಯರಾಜ್ ಖಾರ್ವಿ, ಜೇಸಿಐ ಉಪ್ಪುಂದ ಮಹಿಳಾ ಜೇಸಿ ಸಂಯೋಜಕಿ ರೇಖಾ, ಜೇಸಿಐ ಉಪ್ಪುಂದ ಜ್ಯೂನಿಯರ್ ಜೇಸಿ ಅಧ್ಯಕ್ಷ ನಿಶಾ ಸಂತೋಷ್ ಶೆಟ್ಟಿ, ಉಪಸ್ಥಿತರಿದ್ದರು.
ಜೇಸಿಐ ಉಪ್ಪುಂದ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜಿ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪುರಂದರ ಉಪ್ಪುಂದ ವಂದಿಸಿದರು.