ಶಿರೂರು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್( ರಿ.)ಬೈಂದೂರು ತಾಲೂಕು ಇದರ ಬೈಂದೂರು ವಲಯದ ಕರಾವಳಿ ಶ್ರೀ ನಾಗಶ್ರೀ ಭಜನಾ ಮಂಡಳಿ ಶಿರೂರಿಲ್ಲಿ ಪರಿಸರ ಮಾಹಿತಿ, ಗಿಡ ನಾಟಿ ಹಾಗೂ ಗಿಡ ವಿತರಣೆ ಕಾರ್ಯಕ್ರಮ ರವಿವಾರ ನಡೆಯಿತು.

ಕೇಂದ್ರ ಒಕ್ಕೂಟದ ಅಧ್ಯಕ್ಷ ವಾಸು ಮೇಸ್ತ ಕಾರ್ಯಕ್ರಮ ಉದ್ಘಾಟಿಸಿ ಗಿಡ ವಿತರಣೆ ಮಾಡಿ ಮಾತನಾಡಿದ ಅವರು ಗಿಡ ಮರಗಳಿದ್ದರೆ ಮಾತ್ರ ಮನುಷ್ಯ ಬದುಕಬಹುದಾಗಿದೆ.ಪರಿಸರ ಮತ್ತು ಸಸ್ಯ ಸಂಕುಲ ರಕ್ಷಣೆ ನಮ್ಮೆಲ್ಲರ ಜವಬ್ದಾರಿಯಾಗಿದೆ.ಪ್ರತಿ ಮನೆ ಮನೆಯಲ್ಲಿ ಗಿಡ ಬೆಳಸಬೇಕು ಹಾಗೂ ನೆಲ,ಜಲ ಜಾಗೃತಿ ಅತ್ಯಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ನಾಗಶ್ರೀ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ,ಸ್ಥಳೀಯ ಪ್ರಗತಿಪರ ಕೃಷಿಕ ಜನಾರ್ಧನ್ ಬಿಲ್ಲವ ಹಾಗೂ ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕೃಷಿ ಮೇಲ್ವಿಚಾರಕ ರಾಜು ಕಾರ್ಯಕ್ರಮ ನಿರ್ವಹಿಸಿದರು.ಬೈಂದೂರು ವಲಯದ ಮೇಲ್ವಿಚಾರಕ ರಾಮ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

 

 

Leave a Reply

Your email address will not be published.

eleven + nine =