ಬೈಂದೂರು: ಮನುಷ್ಯನ ಜೀವದಲ್ಲಿರುವ ರಕ್ತ ಜಾತಿ ಧರ್ಮಾದಾರಿತವಲ್ಲ ರಕ್ತದಾನದ ಮೂಲಕ ಅಪಾಯದಲ್ಲಿರುವ ರೋಗಿಯ ಜೀವ ರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ.ಆದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ.ರಕ್ತದಾನ ಮಾಡುವುದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಹಾಗೂ ನಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ವಿಶೇಷವಾದ ಕಾಳಜಿ ವಹಿಸಬೇಕು ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ ಸಿ ಸೌಕೂರು ಹೇಳಿದರು ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಜೇಸಿಐ ಬೈಂದೂರು ಸಿಟಿ, ಟೆಂಪೋ ಆಟೋರಿಕ್ಷಾ ಚಾಲಕರ, ಮಾಲಕರ ಸಂಘ ಬೈಂದೂರು,ರಾಮಕ್ಷತ್ರಿಯ ಸಮಾಜ ಸಂಘ ಬೈಂದೂರು ಇದರ ಸಂಯುಕ್ತ ಆಶ್ರಯದಲ್ಲಿ ಬೈಂದೂರು ಸಮುದಾಯ ಆರೋಗ್ಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಜೇಸಿ ನರೇಂದ್ರ ಶೇಟ್,ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಕ್ತನಿಧಿ ಕೇಂದ್ರ ಉಡುಪಿ ವೈದ್ಯಾಧಿಕಾರಿ ಡಾ ಮಂಜುಶ್ರೀ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಮಕ್ಕಳ ತಜ್ಞ ಡಾ. ನಂದಿನಿ,ಬೈಂದೂರು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಂಗ ಎಸ್ ಯಡ್ತರೆ,ರಾಮಕ್ಷತ್ರಿಯ ಸಮಾಜ ಸಂಘ ಬೈಂದೂರು ಅಧ್ಯಕ್ಷ ರಾಮಕೃಷ್ಣ ಸಿ, ಜೇಸಿಐ ಬೈಂದೂರು ಸಿಟಿ ಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು ಉಪಸ್ಥಿತರಿದ್ದರು.
ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ್ ಸ್ವಾಗತಿಸಿದರು.ಬೈಂದೂರು ತಾಲೂಕಿ ಕ್ಷಯ ಘಟಕದ ಹಿರಿಯ ಚಿಕ್ಸಿತಾ ಮೇಲ್ವಿಚಾರಕ ಸಂದೀಪ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.