ಬೈಂದೂರು; ಜೆಸಿಐ ಉಪ್ಪುಂದ ಇದರ ವತಿಯಿಂದ ಅಗ್ನಿಶಾಮಕ ದಳದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಪೂಜಾರಿ ಇವರನ್ನು ಸೆಲ್ಯೂಟ್ ಸೈಲೆಂಟ್ ವರ್ಕರ್ ನೆಲೆಯಲ್ಲಿ ಮಾತೃಶ್ರೀ ಸಭಾಭವನ  ಉಪ್ಪುಂದದಲ್ಲಿ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ,ಸುನಿಲ್ ಪೂಜಾರಿ,ಅಗ್ನಿಶಾಮಕ ದಳದ ಸಿಬಂದಿ ಚೆನ್ನಯ ಪೂಜಾರಿ, ಜೆಸಿಐ ಉಪ್ಪುಂದದ ನಿಕಟ ಪೂರ್ವ ಅಧ್ಯಕ್ಷ ನಾಗರಾಜ್ ಪೂಜಾರಿ,ಪೂರ್ವಾಧ್ಯಕ್ಷ ಪ್ರಕಾಶ್ ಭಟ್ ಉಪ್ಪುಂದ, ಜ್ಯೂನಿಯರ್ ಜೆಸಿ ಅಧ್ಯಕ್ಷೆ ನಿಶಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪುರಂದರ್ ಉಪ್ಪುಂದ ವಂದಿಸಿದರು.

 

Leave a Reply

Your email address will not be published. Required fields are marked *

twenty + 5 =