ಬೈಂದೂರು; ಬಿಜೆಪಿ ಸರಕಾರದಲ್ಲಿ ಮೀನುಗಾರರಿಗೆ ಅತೀ ಹೆಚ್ಚು ಅನುಕೂಲವಾದ ಯೋಜನೆಗಳು ದೊರೆತಿದೆ.ಈಗಾಗಲೇ ಬಾಕಿ ಉಳಿದಿರುವ ನಾಡದೋಣಿ ಮೀನುಗಾರರ ಸೀಮೆಎಣ್ಣೆ ಕೂಡ ಹಂತ ಹಂತವಾಗಿ ಬಿಡುಗಡೆಯಾಗಿದೆ.ಮರವಂತೆ ಮೀನುಗಾರರು ಮತದಾನ ಬಹಿಷ್ಕರಿಸುವ ವಿಷಯ ಅವರ ಹಕ್ಕಿನ ಆಗ್ರಹಕ್ಕಾಗಿ ಸರಿಯಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಜೊತೆ ಮರವಂತೆಗೆ ಶೀಘ್ರದಲ್ಲಿ ಬೇಟಿ ನೀಡುತ್ತೇನೆ ಎಂದರು.
ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಕುರಿತು ಕೋಟ ಹೇಳಿಕೆಗೆ ಪ್ರತಿಕ್ರಯಿಸಿ ಗೋಪಾಲ ಪೂಜಾರಿಯವರ ವ್ಯಕ್ತಿತ್ವದ ಬಗ್ಗೆ ಅಪಾರ ಗೌರವವಿದೆ.ನಾನು ಅವರನ್ನು ಭಯೋತ್ಪಾದಕ ಎಂದಿಲ್ಲ ಅವರು ಪ್ರತಿನಿಧಿಸುವ ಕಾಂಗ್ರೇಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಕ್ಷವಾಗಿದೆ.ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ.ಜ್ಯೋತಿ ಪಾಂಡ್ಯ,ಶ್ಯಾಮಲ ಎಸ್.ಕುಂದರ್,ಮಹೇಂದ್ರ ಪೂಜಾರಿ,ಸುರೇಶ ಬಟ್ವಾಡಿ,ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಪ್ರಜ್ವಲ್ ಶೆಟ್ಟಿ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ,ಮಾಧ್ಯಮ ಸಂಚಾಲಕ ಗಣೇಶ ಗಾಣಿಗ ಉಪ್ಪುಂದ ಹಾಜರಿದ್ದರು.
News/Girish shiruru