ಬೈಂದೂರು: ಸುರಭಿ (ರಿ.)ಬೈಂದೂರು,ಸುರಭಿ ಜೈಸಿರಿ ಇದರ ಆಶ್ರಯದಲ್ಲಿ ಸಾಂಸ್ಕ್ರತಿಕ ವೈಭವ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ -2023 ಏಪ್ರಿಲ್ 7 ರಿಂದ ಏ.9 ರ ವರೆಗೆ ಸಂಜೆ 6 ಗಂಟೆಗೆ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸುರಭಿ ಅಧ್ಯಕ್ಷ ನಾಗರಾಜ ಪಿ.ಯಡ್ತರೆ ಹೇಳಿದರು ಅವರು ಶನಿವಾರ ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಏಪ್ರಿಲ್ 7 ರಂದು ಖ.ರೈ.ಸೇ.ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕುಂದಾಪುರ ಅಧ್ಯಕ್ಷ ನಾಗರಾಜ ಕೆ,ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಉತ್ತಮ ಕೃಷಿಕ ಮಂಜುನಾಥ ಡಿ.ಕೆ ಹಾಗೂ ಚದುರಂಗ ಬಾಲ ಪ್ರತಿಭೆ ಮಾ.ರಿತೇಶ್ ಆರ್.ಕೆ ರವರನ್ನು ಸುರಭಿ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಗುವುದು.ಬಳಿಕ ಸುರಭಿ (ರಿ.)ಬೈಂದೂರು ಕಲಾವಿದರಿಂದ ಯಕ್ಷೋತ್ಸವ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
ಏ.8 ರಂದು ಸಂಜೆ ಸಭಾ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಯಕ್ಷಗಾನ ಮೇಳದ ವ್ಯವಸ್ಥಾಪಕ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು ಇನ್ನರ್ ವ್ಹೀಲ್ ಕ್ಲಬ್ ಬುಲೆಟಿನ್ ಎಡಿಟರ್ ಶುಭಾಶಂಸನೆಗೈಯಲಿದ್ದಾರೆ ಹಾಗೂ ಚಿತ್ರಕಲಾವಿದ ಸುಪ್ರೀತ್ ಆಚಾರ್ ಬೈಂದೂರು ರವರನ್ನು ಸಮ್ಮಾನಿಸಲಾಗುವುದು ಬಳಿಕ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ.
ಏ.9 ರಂದು ಸಮಾರೋಪ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಉಪ್ಪಿನಕುದ್ರು ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಇವರಿಗೆ 2023 ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ಹಿರಿಯ ಪತ್ರಕರ್ತ ಎಸ್.ಜನಾರ್ಧನ ಮರವಂತೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.ಬಳಿಕ ನಾಟ್ಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸುರಭಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸುರಭಿ ನಿರ್ದೇಶಕ ಸುಧಾಕರ ಪಿ.ಬೈಂದೂರು,ಖಜಾಂಚಿ ಸುರೇಶ್ ಹುದಾರ್ ಯಡ್ತರೆ ಹಾಜರಿದ್ದರು.
News/Giri shirruru