ಬೈಂದೂರು: ಗ್ರಾಮೀಣ ಭಾಗವಾದ ಹೊಸೂರಿನ ರಂಗ ಸಂಸ್ಥೆಯಾದ ಸಂಚಲನ ಸಂಸ್ಥೆ ಪ್ರತಿಭೆ ಹಾಗೂ ಸಂಘಟನೆ ಮೂಲಕ ಉತ್ತಮ ಸಾಧನೆ ಮಾಡಿದೆ.ಪ್ರತಿಭಾವಂತ ಕಲಾವಿದರಿಗೆ ವೇದಿಕೆ ದೊರಕಿಸಿಕೊಡುವ ಜೊತೆಗೆ ಗ್ರಾಮೀಣ ಭಾಗದ ಸಾಧನೆ ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಕೆ.ವಿ.ಸುಬ್ಬಣ್ಣ ವನರಂಗ ಹೊಸೂರು ತೂದಳ್ಳಿಯಲ್ಲಿ ನಡೆದ ಸಂಚಲನ(ರಿ.)ಹೊಸೂರು ಇದರ ರಂಗ ಸಂಚಲನ 15ರ ಸಂಭ್ರಮ ವನಸಿರಿಯಲ್ಲೊಂದು ರಂಗ ಸುಗ್ಗಿ ರಂಗ ಸಂಚಲನ-2023 ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಮಹಾಲಿಂಗ ನಾಯ್ಕ ಜೋಗಿಜಡ್ಡು,ಉದ್ಯಮಿಗಳಾದ ರಾಮ ಮೇಸ್ತ,ನಾಗರಾಜ ಗಾಣಿಗ,ಪ್ರಸಾದ ಪ್ರಭು,ಗುರಿಕಾರ ಗಣೇಶ ಮರಾಠಿ,ಸಿ.ಆರ್.ಪಿ ರಾಮನಾಥ ಮೇಸ್ತ,ಗೌರವಾಧ್ಯಕ್ಷ ತಿಮ್ಮ ಮರಾಠಿ,ಸಂಚಲನದ ಅಧ್ಯಕ್ಷ ಮಹಾದೇವ ಮರಾಠಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಪರಮೇಶ್ವರ ಮರಾಠಿ ಗಂಗನಾಡು ರವರನ್ನು ಸಮ್ಮಾನಿಸಲಾಯಿತು.
ಖಜಾಂಚಿ ನಾಗಪ್ಪ ಮರಾಠಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂಚಾಲಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ರಾಜು ಮರಾಠಿ ವಂದಿಸಿದರು.