ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇಲ್ಲಿನ ವಿದ್ಯಾರ್ಥಿಗಳಿಂದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಪುರಮೆರವಣೆಗೆ ಜಾಥಾ ಕಾರ್ಯಕ್ರಮ ಶಿರೂರು ಮಾದರಿ ಶಾಲೆಯಲ್ಲಿ ನಡೆಯಿತು.ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು ಈ ದೇಶಕ್ಕೆ ಬ್ರಿಟಿಷರ ದಾಷ್ಯದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಅನೇಕ ಮಹಾನ್ ನಾಯಕರ ಹೋರಾಟ,ಪರಿಶ್ರಮದ ಶ್ರಮವಿದೆ.ಅಂತಹ ಮಹಾನ್ ನಾಯಕರ ತ್ಯಾಗ ಬಲಿದಾನದಿಂದ ದೇಶ ಇಂದು ಜಾಗತಿಕ ಮಟ್ಟದಲ್ಲಿ ಸುಭದ್ರತೆಯನ್ನು ಕಂಡಿದೆ.ದೇಶದ ನೆಲ,ಜಲ ಹಾಗೂ ಸಂಸ್ಕ್ರತಿಯನ್ನು ಕಾಪಾಡಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಜಾಥಾ ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರಘುವೀರ ಶೇಟ್,ಉಪಾಧ್ಯಕ್ಷೆ ದೇವಕಿ ಬಿಲ್ಲವ,

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಮೈದಿನಪುರ, ಸುರೇಂದ್ರ ದೇವಾಡಿಗ,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.ಈ ಸಂದರ್ಭದಲ್ಲಿ ಶಿರೂರು ಮಾದರಿ ಶಾಲೆಯಿಂದ ಶಿರೂರು ಕೆಳಪೇಟೆ ತನಕ ವಿದ್ಯಾರ್ಥಿಗಳು ಜಾಥಾ ನಡೆಸಿದರು.

ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು,ಶಿಕ್ಷಕ ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.ಸೋಮರಾಯ ಜನ್ನು ವಂದಿಸಿದರು.

News/Giri shiruru

pic/a.one studio shiruru

 

Leave a Reply

Your email address will not be published.

three × 4 =