ಶಿರೂರು: ಕರಾವಳಿ ಅತ್ಯಂತ ಕ್ರಿಯಾಶೀಲ ಯುವಕರನ್ನು ಹೊಂದಿದ ಪ್ರದೇಶವಾಗಿದೆ.ಧಾರ್ಮಿಕ,ಸಾಂಸ್ಕ್ರತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ.ಯುವಶಕ್ತಿ ಮತ್ತು ಅರುಣ್ ಪಬ್ಲಿಸಿಟಿ ಮೂಲಕ ಕರಾವಳಿ ಭಾಗದಲ್ಲಿ ಆಯೋಜಿಸಿದ ಈ ಸಾಂಸ್ಕ್ರತಿಕ ಹಬ್ಬ ಮನೋರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಹಿರಿಯರಾದ ನಾಣು ಬಿಲ್ಲವ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ದೃತಿ ಸರ್ಜಿಕಲ್ ಮಾಲಿಕ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಯುವಶಕ್ತಿ ಅಧ್ಯಕ್ಷ ವಿಠ್ಠಲ ಬಿಲ್ಲವ,ಮಾಜಿ ಅಧ್ಯಕ್ಷರಾದ ವಾಸು ಬಿಲ್ಲವ ತೆಂಕಮನೆ,ಅಣ್ಣಪ್ಪ ಮೊಗೇರ್,ಉಮೇಶ್ ಮೊಗೇರ್,ರವಿದಾಸ್ ಮೊಗೇರ್,ಚಂದ್ರ ಬಿಲ್ಲವ,ರಮೇಶ್ ಮೊಗೇರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿರೂರು ಅಸೋಸಿಯೇಷನ್ ರವರ ಮೊಬಲ್ ಕ್ಲಿನಿಕ್ ಲೋಕಾರ್ಪಣೆಗೊಳಿಸಲಾಯಿತು.ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿದರು.ಅರುಣ್ ಶಿರೂರು ಪ್ರಾಸ್ತಾವಿಕ ಮಾತಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.ಗಣಪತಿ ಬೇಡುಮನೆ ವಂದಿಸಿದರು.