ಶಿರೂರು: ವಿ.ಎಮ್.ಸಿ.ಟಿ ಕ್ರಿಕೆಟರ್‍ಸ್ ಶಿರೂರು ಹಾಗೂ ಶ್ರೀ ಗಣೇಶ ಯುವಕ ಮಿತ್ರ ಮಂಡಳಿ(ರಿ.) ಹಡವಿನಕೋಣೆ ಶಿರೂರು ಇದರ ಚಾರೋಡಿ ಮೇಸ್ತ ಸಮಾಜ ಬಾಂಧವರ ಮೂರು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಶಿರೂರು ಸ.ಪ.ಪೂ ಕಾಲೇಜಿನ ಗಾಂಧಿ ಮೈದಾನದಲ್ಲಿ ನಡೆಯಿತು.
ಶ್ರೀ ದುರ್ಗಾಂಬಿಕಾ ಸೇವಾ ಸಂಘದ ಅಧ್ಯಕ್ಷ ಕೆ.ಎನ್.ಆಚಾರ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಕೂಟಗಳ ಆಯೋಜನೆ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿರುವುದಿಲ್ಲ ಬದಲಾಗಿ ಸಂಘಟನೆ,ಪರಸ್ಪರ ಬಾಂಧವ್ಯ ಹಾಗೂ ಸ್ನೇಹ ಸಾಮರಸ್ಯವನ್ನು ಬೆಳೆಸುತ್ತದೆ ಮೇಸ್ತ ಸಮುದಾಯದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರ ಮೂಲಕ ಉತ್ತಮ ಕಾರ್ಯಕ್ರಮವನ್ನು ವಿ.ಎಮ್.ಸಿ.ಟಿ ಶಿರೂರು ತಂಡ ಆಯೋಜಿಸಿದೆ ಶಿಸ್ತು ಹಾಗೂ ಒಗ್ಗಟ್ಟು ಶ್ಲಾಘನೀಯವಾಗಿದೆ.ಈ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಶ್ರೀ ಗಣೇಶ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಜಿ.ಮೇಸ್ತ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ ಟ್ರೋಪಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಬಾಬುರಾಯ ಜಿ.ಕಾಮತ್,ಚಂದ್ರಹಾಸ್ ಬಿ.ಶಿರೂರಕರ್,ಸುಬ್ರಾಯ ನಾಯ್ಕ,ಕೇಶವ ಕೆ.ಮೇಸ್ತ,ಮೋಹನ್ ರೇವಣ್ಕರ್,ಚಂದ್ರಕಲಾ ಆರ್.ಮೇಸ್ತ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ರಾಮನಾಥ ಪಿ.ಮೇಸ್ತ,ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ನಿರ್ದೇಶಕ ತುಳಸಿದಾಸ್ ಮೊಗೇರ್,ಬೈ.ವ್ಯ.ಸೇ.ಸ.ಸಂಘದ ನಿರ್ದೇಶಕ ಗಿರೀಶ್ ಮೇಸ್ತ,ಶೇಷಗಿರಿ ಮೇಸ್ತ ಉಪಸ್ಥಿತರಿದ್ದರು.
ಸಂತೋಷ ಮೇಸ್ತ ಸ್ವಾಗತಿಸಿದರು.ಶಿಕ್ಷಕ ರಾಮನಾಥ ಪಿ.ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.ಸಂಘದ ಅಧ್ಯಕ್ಷ ಅಣ್ಣಪ್ಪ ವಿ.ಮೇಸ್ತ ವಂದಿಸಿದರು.
News/Giri shiruru
pic: Pavan Mestha kalihithlu shiruru