ಶಿರೂರು: ಯಕ್ಷಗಾನ ಕರಾವಳಿಯ ಹಿರಿಮೆಯನ್ನು ಹೆಚ್ಚಿಸದ ಕಲಾಪ್ರಕಾರವಾಗಿದೆ.ಕಲೆ ಶಿಕ್ಷಣದ ಜೊತೆಗೆ ಜ್ಞಾನ ನೀಡುವ ಮಾಧ್ಯಮವಾಗಿದೆ.ಹೊಸ ಪ್ರತಿಭೆಗಳನ್ನು ಸಿದ್ದಗೊಳಿಸುವ ಜೊತೆಗೆ ಯಕ್ಷಗಾನ ಕ್ಷೇತ್ರದ ಉಳಿವಿಗೆ ಪ್ರಯತ್ನಿಸುವ ಯಕ್ಷ ಸಂಪದ ಕಲಾ ಬಳಗ ಶಿರೂರಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಯಕ್ಷ ಸಂಪದ ಕಲಾ ಬಳಗ ಶಿರೂರು ಇದರ ಯಕ್ಷ ಸಂಭ್ರಮ -2023 ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಉದ್ಯಮಿ ಹಾಗೂ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಪೂಜಾರಿ ಶುಭಶಂಸನೆಗೈದು ಮಾತನಾಡಿದ ಅವರು ಗ್ರಾಮೀಣ ಭಾಗವಾದ ಶಿರೂರಿನಲ್ಲಿ ಕಲೆ,ಸಂಸ್ಕ್ರತಿ ಹಾಗೂ ಸಾಹಿತ್ಯದ ಜೊತೆಗೆ ವಿವಿಧ ಕ್ಷೇತ್ರದ ಅನೇಕ ಸಾಧಕರಿದ್ದಾರೆ.ಯಕ್ಷಗಾನ ಕ್ಷೇತ್ರಕ್ಕೆ ಚಿಕ್ಕು ಪೂಜಾರಿಯವರ ಕೊಡುಗೆ ಅಪಾರವಾಗಿದೆ ಎಂದರು.
ಯಕ್ಷ ಸಂಪದ ಕಲಾ ಬಳಗ ಶಿರೂರು ಅಧ್ಯಕ್ಷ ಚಿಕ್ಕು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ,ಉದ್ಯಮಿ ಕೇಶವ ಪೂಜಾರಿ,ಬ.ವ್ಯ.ಸೇ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರ ಮೊಗೇರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪುರೋಹಿತ ಶ್ಯಾಮ ಅವಭೃತ,ಶಿರೂರಿನ ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್,ನಾಗೇಶ ಮೇಸ್ತ ನಾಗಿನಗದ್ದೆ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಮಾಧವ ಬಿಲ್ಲವ ಹಾಗೂ ಯಕ್ಷಗಾನ ಗುರುಗಳಾದ ಶ್ರೀಧರ ದೇವಾಡಿಗ ರವರನ್ನು ಯಕ್ಷ ಸಂಪದ ವತಿಯಿಂದ ಸಮ್ಮಾನಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ ಗೋವಿಂದ ಬಿಲ್ಲವ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಸಿ.ಎನ್.ಬಿಲ್ಲವ ಸ್ವಾಗತಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಮಹಾದೇವ ಬಿಲ್ಲವ ವಂದಿಸಿದರು.ಬಳಿಕ ಯಕ್ಷ ಸಂಪದ ಕಲಾ ಬಳಗ ಶಿಷ್ಯ ವೃಂದದವರಿಂದ ಮಾಯಾಪುರಿ ಯಕ್ಷಗಾನ ಪ್ರದರ್ಶನಗೊಂಡಿತು.
ವರದಿ/ಗಿರಿ ಶಿರೂರು
ಚಿತ್ರ: ಸುರೇಶ್ ಮಾಕೋಡಿ