ಶಿರೂರು: ಜೆಸಿಐ ಶಿರೂರು ಇದರ 2023ನೇ ಸಾಲಿನ ಪದಪ್ರಧಾನ ಕಾರ್ಯಕ್ರಮ ಎಮ್.ಎಮ್ ರೇಸಾರ್ಟ್ ಗೋರ್ಟೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಮಾತನಾಡಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಜೆ.ಸಿ.ಐ ಸಂಸ್ಥೆ ಇತರರಿಗೆ ಮಾದರಿಯಾಗಿದೆ.ಯುವ ಸಮುದಾಯದ ಕ್ರಿಯಾಶೀಲತೆಯಿಂದ ಮಹತ್ತರವಾದ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ.ಅಭಿವೃದ್ದಿ ಪರ ಚಿಂತನೆಯಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಲು ಜೆ.ಸಿ.ಐ ಮಾರ್ಗದರ್ಶಿಯಾಗಿದೆ.ವ್ಯಕ್ತಿ ಕ್ರಿಯಾಶೀಲರಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಸುರೇಶ್ ಮಾಕೋಡಿ ನೂತನ ಅಧ್ಯಕ್ಷರಾದ ನಾಗೇಂದ್ರ ಪ್ರಭುರವರಿಗೆ ಅಧಿಕಾರ ಹಸ್ತಾಂತರಿಸಿದರು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಮಂಜುನಾಥ ದೇವಾಡಿಗ,ವಲಯಾಧಿಕಾರಿ ಪಾಂಡುರಂಗ ಅಳ್ವೆಗದ್ದೆ,ಜೇಸಿರೇಟ್ ಅಧ್ಯಕ್ಷೆ ಸ್ಮಿತಾ ಹರೀಶ್ ಶೇಟ್,ಜೂನಿಯರ್ ಜೇಸಿ ಅಧ್ಯಕ್ಷೆ ನಿಶ್ಚಿತಾ ರಾಜೇಶ್,ನಿಕಟಪೂರ್ವ ಜೇಸಿರೇಟ್ ಅಧ್ಯಕ್ಷೆ ನಾಗರತ್ನ ರಾಜೇಶ್,ನಿಕಟಪೂರ್ವ ಕಾರ್ಯದರ್ಶಿ ನಾಗರಾಜ ಪ್ರಭು,ಸುಹಾಸ್ ಜಿ.ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ಆರಕ್ಷಕ ಠಾಣೆಯ ಸಿಬಂದಿ ಪ್ರಥ್ವಿರಾಜ್ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು.ಜೆಸಿಐ ಅಧ್ಯಕ್ಷ ನಾಗೇಂದ್ರ ಪ್ರಭು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ನೂತನ ಕಾರ್ಯದರ್ಶಿ ವಿನೋದ ಮೇಸ್ತ ವಂದಿಸಿದರು.
News/Giri shiruru