ಬೈಂದೂರು,ಜೂ.26: ಶ್ರೀ ರಾಮಕ್ಷತ್ರಿಯ ಸಂಘ,ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರು ಇದರ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಹಾಗೂ 21ನೇ ಪ್ರತಿಷ್ಠಾ ವಧಂರ್ತ್ಯೋತ್ಸವ ಜೂ.27 ಹಾಗೂ 28 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

ಜೂ.27 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಕರ್ಮಾರಂಭ ಧ್ವಜಾರೋಹಣ,ಮದ್ಯಾಹ್ನ 12-25ಕ್ಕೆ ಒದಗುವ ಶುಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್‌ ಸ್ವರ್ಣವಲ್ಲಿ ಮಠಾದೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ವಿದ್ವಾನ್‌ ವೆ! ಕಟ್ಟೆ ತಿಮ್ಮಣ್ಣ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ನಡೆಯಲಿದೆ ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಶ್ರೀಮದ್‌ ಶ್ರೀ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಯವರು ಆಶೀರ್ವಚನ ನೀಡಲಿದ್ದಾರೆ.

ಧಾರ್ಮಿಕ, ಸಾಮಾಜಿಕ ಸೇವಾಕರ್ತರಾದ ಬಿ. ರಾಮಕೃಷ್ಣ ಶೇರೆಗಾರ ಬಿಜೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಶಶಿಧರ ನಾಯ್ಕ, ಸುಬ್ಬಯ್ಯ ಇನ್ಸ್‌ಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸ್‌ ಶಿವಮೊಗ್ಗದ ಪ್ರೋಫೆಸರ್‌ ಆ್ಯಂಡ್‌ ಪ್ರಿನ್ಸಿಪಾಲ್‌ ಡಾ| ಶಿವಾನಂದ ನಾಯ್ಕ, ರಾಮಕ್ಷತ್ರಿಯ ಸಂಘ ಗಂಗೊಳ್ಳಿ ಅಧ್ಯಕ್ಷ ಎಂ. ಜಿ. ರಾಜೇಶ್‌,ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ರಾಮಕೃಷ್ಣ ಸಿ. ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಂಜೆ 6 ಗಂಟೆಗೆ ಭೂತ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷಘ್ನ ಹೋಮ, ರಂಗಪೂಜೆ, ಮಹಾಬಲಿ, ಅಷ್ಠಾವಧಾನ ಸೇವೆ ನಡೆಯಲಿದೆ.

ಜೂ.28 ರಂದು ಬೆಳಿಗ್ಗೆ ಅಧಿವಾಸ ಹೋಮ, ಕಲಾವೃದ್ಧಿಹೋಮ, ಕ್ಷೀರಾಭಿಷೇಕ, ಕಲಶಾಭಿಷೇಕ, ಬಲಿ ಪೂರ್ಣಾಹುತಿ, ಧ್ವಜಾ ಅವರೋಹಣ, ಮಹಾನೈವೇದ್ಯ,ಮಂಗಳಾರತಿ, ಪ್ರಸಾದ ವಿತರಣೆ, ಆಶೀರ್ವಾದ, ಮಂತ್ರಾಕ್ಷತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

20 + 8 =