ಬೈಂದೂರು,ಜೂ.22: ಪ್ರತಿಷ್ಠಿತ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿ ಈ ಮೂಲಕ ಶಿರೂರಿಗೆ ಕೀರ್ತಿ ತಂದಿದ್ದ ಮೂವರು ಶಿರೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾದ ಸ್ರಜನ್ ಎಸ್, ಪ್ರಸಾದ್ ಶೆಟ್ಟಿ ಹಾಗೂ ಆಶಿಶ್ ಶೆಟ್ಟಿ ಇವರನ್ನು ಶಿರೂರು ಜೆಸಿಐ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಶಿರೂರು ಜೆಸಿಐ ಅಧ್ಯಕ್ಷ ವಿನೋದ ಮೇಸ್ತ,ಪೂರ್ವಾಧ್ಯಕ್ಷರಾದ ಪಾಂಡುರಂಗ ಅಳ್ವೆಗದ್ದೆ,ಪ್ರಕಾಶ್ ಮಕೋಡಿ, ಸುರೇಶ್ ಮಾಕೋಡಿ, ಸತೀಶ್ ಕೊಠಾರಿ, ನಾಗೇಶ್ ಕೆ, ನಾಗೇಂದ್ರ ಪ್ರಭು,ಜಯಂತ ಪೂಜಾರಿ,ಸದಸ್ಯ ಕೃಷ್ಣ ಪೂಜಾರಿ, ಜೆಜೆಸಿ ಅಧ್ಯಕ್ಷ ದೇವೇಂದ್ರ ಪಾಟೀಲ್,ಕಾರ್ಯದರ್ಶಿ ಪವನ್ ಪೂಜಾರಿ ಉಪಸ್ಥಿತರಿದ್ದರು.
