ಶಿರೂರು: ಪ್ರತಿಷ್ಠಿತ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಶಿರೂರಿನ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿದ್ದಾರೆ.ಈ ಮೂಲಕ ಶಿರೂರಿಗೆ ಕೀರ್ತಿ ತಂದಿದ್ದ ಮೂವರು ಯುವಕರು ಶಿರೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳದ್ದಾಗಿದೆ.
ಶಿರೂರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೂರು ನೀರ್‍ಗದ್ದೆ ನಿವಾಸಿ ಸುಬ್ರಾಯ ಗಾಣಿಗ ಹಾಗೂ ಸವಿತಾ ದಂಪತಿಗಳ ಪುತ್ರರಾದ ಸೃಜನ್ ಎಸ್,ಶಿರೂರು ಗ್ರಾಮದ ಕಳಿಹಿತ್ಲು ನಿವಾಸಿ ಶ್ರೀಕಾಂತ ಶೆಟ್ಟಿ ಹಾಗೂ ಶಿಕ್ಷಕಿ ಪ್ರೇಮಾ ಶೆಟ್ಟಿ ದಂಪತಿಗಳ ಪುತ್ರರಾದ ಪ್ರಸಾದ ಶೆಟ್ಟಿ ಹಾಗೂ ಶಿರೂರು ಗ್ರಾಮದ ಮಾತೃಛಾಯ ಹೊಸ್ಮನೆ ನಿವಾಸಿ ಅನಿತಾ ಶೆಟ್ಟಿ ಯವರ ಪುತ್ರರಾದ ಆಶೀಶ್ ಶೆಟ್ಟಿ ಈ ಮೂವರು ವಿದ್ಯಾರ್ಥಿಗಳು ಸಿ.ಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಶಿರೂರಿಗೆ ಕೀರ್ತಿ ತಂದಿದ್ದಾರೆ.