ಶಿರೂರು ; ಶಿರೂರು ಜಿ.ಎಸ್.ಬಿ ಸಮಾಜದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಶಿರೂರು ಪೇಟೆ ವೆಂಕಟರಮಣ ದೇವಸ್ಥಾನದಿಂದ ಪಾದಯಾತ್ರೆ ಹೊರಟು ಭಟ್ಕಳ ಶಾಂತೇರಿ ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ,ಶಿರಾಲಿ ವೆಂಕಟಾಪುರ ಲಕ್ಷ್ಮಿ ವೆಂಕಟೇಶ ದೇವಸ್ಥಾನ ಸನ್ನಿಧಿಗೆ ತೆರಳಿ ಬಳಿಕ ಶಿರಾಲಿ ಮಹಾಮಾಯ ಮಹಾಗಣಪತಿ ದೇವಸ್ಥಾನದಲ್ಲಿ ಪಾದಯಾತ್ರೆಯನ್ನು ಸಮಾಪ್ತಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಗಣೇಶ ಪ್ರಭು ಹಾಗೂ ಶಿರೂರು ಜಿ.ಎಸ್.ಬಿ ಸಮಾಜದ ಮುಖಂಡರು ಹಾಜರಿದ್ದರು.